Ad imageAd image

ಎಫ್‌ಎಂ ರೇಡಿಯೋಗಳಲ್ಲಿ  ‘ಭಾರತೀಯ ಹಾಡುಗಳ’ ನಿಷೇಧ ಹೇರಿದ ಪಾಕಿಸ್ತಾನ

Bharath Vaibhav
ಎಫ್‌ಎಂ ರೇಡಿಯೋಗಳಲ್ಲಿ  ‘ಭಾರತೀಯ ಹಾಡುಗಳ’ ನಿಷೇಧ ಹೇರಿದ ಪಾಕಿಸ್ತಾನ
WhatsApp Group Join Now
Telegram Group Join Now

ಇಸ್ಲಾಮಾಬಾದ್: ಭಾರತದ ದಾಳಿಯ ಭಯದಿಂದ ಪತರಗುಟ್ಟಿರುವ ಪಾಕಿಸ್ತಾನ ಇದೀಗ ಎಫ್‌ಎಂ ರೇಡಿಯೋ ಕೇಂದ್ರಗಳಲ್ಲಿ ‘ಭಾರತೀಯ ಹಾಡುಗಳ’ ಪ್ರಸಾರವನ್ನು ಇಂದು ನಿಷೇಧಿಸಿದೆ.

ದೇಶಾದ್ಯಂತ ಪಾಕಿಸ್ತಾನಿ ಎಫ್‌ಎಂ ರೇಡಿಯೋ ಕೇಂದ್ರಗಳಲ್ಲಿ ಭಾರತೀಯ ಹಾಡುಗಳ ಪ್ರಸಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಾಕಿಸ್ತಾನ ಪ್ರಸಾರಕರ ಸಂಘ (PBA) ಸೂಚಿಸಿದೆ ಎಂದು ಪಿಬಿಎ ಪ್ರಧಾನ ಕಾರ್ಯದರ್ಶಿ ಶಕೀಲ್ ಮಸೂದ್ ಹೇಳಿದ್ದಾರೆ.

ಭಾರತೀಯ ಹಾಡುಗಳು, ವಿಶೇಷವಾಗಿ ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ, ಕಿಶೋರ್ ಕುಮಾರ್ ಮತ್ತು ಮುಖೇಶ್ ಅವರಂತಹ ಶ್ರೇಷ್ಠರ ಹಾಡುಗಳು ಪಾಕಿಸ್ತಾನಿಗಳಲ್ಲಿ ಜನಪ್ರಿಯವಾಗಿವೆ. ಪಾಕಿಸ್ತಾನದ ಎಫ್‌ಎಂ ರೇಡಿಯೋ ಕೇಂದ್ರಗಳು ಪ್ರತಿದಿನ ಇವರುಗಳ ಹಾಡುಗಳನ್ನು ಪ್ರಸಾರ ಮಾಡುತ್ತವೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!