ನವದೆಹಲಿ : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿ 26 ಅಮಾಯಕರ ಜೀವವನ್ನು ಬಲಿ ಪಡೆದಿದ್ದಾರೆ. ಇದರ ಬೆನ್ನಲ್ಲೇ ನವದೆಹಲಿಯಲ್ಲಿರುವ ಪಾಕಿಸ್ತಾನದ ರಾಜತಾಂತ್ರಿಕ ಕಚೇರಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ನಡೆಸಿರುವ ದೃಶ್ಯ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಯುವಕನೊಬ್ಬ ಹೈಕಮಿಷನ್ ಕಚೇರಿಯ ಒಳಗೆ ಕೇಕ್ ಕೊಂಡೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈತ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದೇ ನುಣುಚಿಕೊಂಡಿದ್ದಾನೆ. ನೀವು ಯಾರು, ಪಾಕಿಸ್ತಾನದಿಂದ ಬಂದಿದ್ದೀರಾ, ಕೇಕ್ ಯಾಕೆ ಒಳಗೆ ಕೊಂಡೊಯ್ಯುತ್ತಿದ್ದೀರಾ ಎಂಬ ಪ್ರಶ್ನೆಗಳಿಗೆ ಆತ ಉತ್ತರಿಸಲು ನಿರಾಕರಿಸಿದ್ದಾರೆ.
ಪಾಕಿಸ್ತಾನ ರಾಜತಾಂತ್ರಿಕ ಕಚೇರಿಯ ವಿರುದ್ದವೂ ಸಿಡಿದೆದ್ದಿರುವ ಭಾರತ. 50 ಮಂದಿಯ ಪೈಕಿ ಇಪ್ಪತ್ತು ಜನರಿಗೆ ಗೇಟ್ ಪಾಸ್ ನೀಡಿದೆ. ಮೇ. 1 ರ ಒಳಗೆ ದೇಶ ತೊರೆಯುವಂತೆ ರಾಜತಾಂತ್ರಿಕ ಅಧಿಕಾರಿಗಳಿಗೆ ಭಾರತ ಸೂಚಿಸಿದೆ.