ಭಾರತವು ಪಾಕ್ ಮೇಲೆ ವೈಮಾನಿಕ ದಾಳಿಯ ಬಳಿಕ ಪಾಕ್ ಸೇನೆ ಎಲ್‌ಒಸಿ ಗಡಿ ಉದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ಮಾಡಿದ್ದಲ್ಲದೆ, ಕಳೆದ ಎರಡು ದಿನಗಳಿಂದ ಶೆಲ್ ದಾಳಿ ನಡೆಸಲಾಗುತ್ತಿದೆ. ಈ ದಾಳಿಯಲ್ಲಿ ಭಾರತೀಯ ಸೇನೆಯ ಯೋಧರೊಬ್ಬರು ವೀರ ಮರಣವನ್ನಪ್ಪಿದ್ದಾರೆ.
ಭಾರತೀಯ ಸೇನೆಯು ಉಗ್ರರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದರೆ, ಅತ್ತ ಪಾಕ್ ಮಾತ್ರ ನಾಗರಿಕರನ್ನು ಗುರಿಯಾಗಿಸಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಶೆಲ್ ದಾಳಿ ಮಾಡಲಾಗುತ್ತಿದೆ. ಈ ದಾಳಿಯಲ್ಲಿ ಇದುವರೆಗೆ 31 ಜನ ಅಮಾಯಕರು ಮೃತಪಟ್ಟಿದ್ದಾರೆ.
ಪಾಕ್ ಈ ಅಪ್ರಚೋದಿತ ಗುಂಡಿನ ದಾಳಿಗೆ ತಕ್ಕ ಉತ್ತರ ನೀಡುವ ವೇಳೆ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಅವರಿಗೆ ಗುಂಡೇಟು ತಗುಲಿದ್ದು, ಕೊನೆಯುಸಿರಿರುವವರೆಗೂ ಧೈರ್ಯದಿಂದ ಹೋರಾಡಿ ವೀರ ಮರಣವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ದೃಢಪಡಿಸಿದೆ.




