———————————————28 ರಂದು ಭಾರತ- ಪಾಕಿಸ್ತಾನ ಫೈನಲ್ ಕಾಳಗ
ದುಬೈ: ಬಾಂಗ್ಲಾ ದೇಶ ತಂಡವನ್ನು 11 ರನ್ ಗಳಿಂದ ಮಣಿಸಿದ ಪಾಕಿಸ್ತಾನ ತಂಡವು ಇಲ್ಲಿ ನಡೆದಿರುವ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫೈನಲ್ ತಲುಪಿತು. ಇದೇ ದಿ. 28 ರಂದು ಭಾರತ- ಪಾಕಿಸ್ತಾನ ಫೈನಲ್ ನಲ್ಲಿ ಮುಖಾಮುಖಿಯಾಗಲಿದ್ದು ಏಶಿಯಾ ಕಪ್ ಟ್ರೋಫಿಗಾಗಿ ಸೆಣಸಾಡಲಿವೆ.
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಸೂಪರ್-4 ರ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರುಗಳಲ್ಲಿ 8 ವಿಕೆಟ್ ಗೆ 135 ರನ್ ಗಳಿಸಿತು. ಪ್ರತಿಯಾಗಿ ಆಡಿದ ಬಾಂಗ್ಲಾದೇಶ ತಂಡವು 9 ವಿಕೆಟ್ ಗೆ 124 ರನ್ ಗಳನ್ನು ಮಾತ್ರ ಗಳಿಸಿ 11 ರನ್ ಗಳಿಂದ ಪರಾಭವಗೊಂಡಿತು.
ಸ್ಕೋರ್ ವಿವರ:
ಪಾಕಿಸ್ತಾನ 20 ಓವರುಗಳಲ್ಲಿ 8 ವಿಕೆಟ್ ಗೆ 135
ಮೊಹ್ಮದ್ ಹ್ಯಾರಿಸ್ 31 ( 23 ಎಸೆತ, 2 ಬೌಂಡರಿ, 1 ಸಿಕ್ಸರ್) ಸಾಹೀನ್ ಅಪ್ರಿಧಿ 19 ( 13 ಎಸೆತ, 2 ಸಿಕ್ಸರ್)
ಮೊಹ್ಮದ ನವಾಜ್ 25 ( 15 ಎಸೆತ, 1 ಬೌಂಡರಿ, 2 ಸಿಕ್ಸರ್), ಟಸ್ಕೀನ್ ಅಹ್ಮದ್ 28 ಕ್ಕೆ 3) ರಷಿದ್ ಹುಸೇನ್ 18 ಕ್ಕೆ 2)
ಬಾಂಗ್ಲಾದೇಶ 9 ವಿಕೆಟ್ ಗೆ 124
ಶಮೀಮ್ ಹುಸೇನ್ 30 ( 25 ಎಸೆತ, 2 ಸಿಕ್ಸರ್) ಸೈಪ್ ಹಸನ್ 18 ( 15 ಎಸೆತ, 1 ಬೌಂಡರಿ, 2 ಸಿಕ್ಸರ್)
ಶಾಹೀನ್ ಅಪ್ರಿಧಿ 17 ಕ್ಕೆ 3, ಹ್ಯಾರಿಸ್ ರಫ್ 33 ಕ್ಕೆ 3) ಸೈಮ್ ಅಯುಬ್ 16 ಕ್ಕೆ 2)
————————————-ಪಂದ್ಯ ಶ್ರೇಷ್ಠ: ಶಾಹೀನ್ ಅಪ್ರಿಧಿ




