Ad imageAd image

ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ‘ಅಬೀರ್ ಗುಲಾಲ್’ ಚಿತ್ರಕ್ಕೆ ಭಾರತದಲ್ಲಿ ನಿಷೇಧ

Bharath Vaibhav
ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ‘ಅಬೀರ್ ಗುಲಾಲ್’ ಚಿತ್ರಕ್ಕೆ ಭಾರತದಲ್ಲಿ ನಿಷೇಧ
WhatsApp Group Join Now
Telegram Group Join Now

ಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಬಹಿಷ್ಕಾರದ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ‘ಅಬೀರ್ ಗುಲಾಲ್’ ಚಿತ್ರಕ್ಕೆ ಭಾರತದಲ್ಲಿ ನಿಷೇಧ ಹೇರಲಾಗಿದೆ. ಈ​ ಚಿತ್ರದ ಮೂಲಕ ಪಾಕ್​ ನಟ ಬಾಲಿವುಡ್​ಗೆ ಮರಳಿದ್ದರು.

ವಾಣಿ ಕಪೂರ್ ಜೊತೆ ತೆರೆ ಹಂಚಿಕೊಂಡಿರುವ ಈ ಹಿಂದಿ​​ ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಗಳು ಇಂದು ತಿಳಿಸಿವೆ.

ಎಲ್ಲಾ ಪಾಕಿಸ್ತಾನಿ ಕಲಾವಿದರು, ಗಾಯಕರು ಮತ್ತು ತಂತ್ರಜ್ಞರ ಕೆಲಸಗಳಿಗೆ ಸಹಕಾರ ನೀಡಬಾರದೆಂದು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಒತ್ತಾಯಿಸಿದ ನಂತರ ಈ ನಿರ್ಧಾರ ಹೊರಬಿದ್ದಿದೆ. ಬುಧವಾರ ಬಿಡುಗಡೆಯಾದ ಹೇಳಿಕೆಯಲ್ಲಿ, FWICE ಎಲ್ಲಾ ಪಾಕಿಸ್ತಾನಿ ಕಲಾವಿದರ ಬಹಿಷ್ಕಾರದ ಬಗ್ಗೆ ಒತ್ತಿ ಹೇಳಿದೆ.

“ಈಗಿನ ನಿರ್ದೇಶನದ ಹೊರತಾಗಿಯೂ, ಪಾಕಿಸ್ತಾನಿ ನಟ ಫವಾದ್ ಖಾನ್ ಅವರ ಹಿಂದಿ ಚಿತ್ರ ಅಬೀರ್ ಗುಲಾಲ್ ಜೊತೆಗಿನ ಕೊಲಾಬರೇಶನ್​​ ಬಗ್ಗೆ ನಮಗೆ ತಿಳಿಸಲಾಗಿದೆ. ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ದಾಳಿಯ ಹಿನ್ನೆಲೆಯಲ್ಲಿ, ಯಾವುದೇ ಭಾರತೀಯ ಚಲನಚಿತ್ರ ಅಥವಾ ಎಂಟರ್​​​​ಟೈನ್ಮೆಂಟ್​​ ಪ್ರಾಜೆಕ್ಟ್‌ಗಳಲ್ಲಿ ಭಾಗವಹಿಸುವ ಎಲ್ಲಾ ಪಾಕಿಸ್ತಾನಿ ಕಲಾವಿದರು, ಗಾಯಕರು ಮತ್ತು ತಂತ್ರಜ್ಞರ ಮೇಲೆ FWICE ಮತ್ತೊಮ್ಮೆ ಸಂಪೂರ್ಣ ಬಹಿಷ್ಕಾರ ಹೊರಡಿಸಲು ಒತ್ತಾಯಿಸಲ್ಪಟ್ಟಿದೆ. ಇದರಲ್ಲಿ, ಜಗತ್ತಿನ ಯಾವುದೇ ಪ್ರದೇಶದಲ್ಲಿ ನಡೆಯುವ ಪ್ರದರ್ಶನಗಳು ಅಥವಾ ಕೊಲಾಬರೇಶನ್​ಗಳೂ ಸೇರಿವೆ” ಎಂದು FWICE ಹೇಳಿದೆ.

ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳಿಗೆ ನಟ ಫವಾದ್ ಖಾನ್​​ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದರು. “ಪಹಲ್ಗಾಮ್‌ನಲ್ಲಿ ನಡೆದ ಘೋರ ದಾಳಿಯ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಈ ಭಯಾನಕ ಘಟನೆಯಲ್ಲಿ ಕೊನೆಯುಸಿರೆಳೆದವರೊಂದಿಗೆ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳಿವೆ. ಈ ಕಠಿಣ ವೇಳೆ ಅವರ ಕುಟುಂಬಗಳಿಗೆ ಶಕ್ತಿ ಸಿಗಲೆಂದು ನಾವು ಪ್ರಾರ್ಥಿಸುತ್ತೇವೆ” ಎಂದು ಬರೆದುಕೊಂಡಿದ್ದರು.

ಆರತಿ ಎಸ್.ಬಾಗ್ದಿ ನಿರ್ದೇಶನದ ‘ಅಬೀರ್ ಗುಲಾಲ್’ ಚಿತ್ರ ಮೇ 9ರಂದು ಬಿಡುಗಡೆಗೊಳ್ಳಲು ರೆಡಿಯಾಗಿದೆ. 9 ವರ್ಷಗಳ ನಂತರ ಫವಾದ್ ಬಾಲಿವುಡ್‌ಗೆ ಮರಳಲು ಸಜ್ಜಾಗಿದ್ದಾರೆ. ನಟ ಕೊನೆಯ ಬಾರಿಗೆ ಬಾಲಿವುಡ್ ಚಿತ್ರ ‘ಏ ದಿಲ್ ಹೈ ಮುಷ್ಕಿಲ್’ (2016)ನಲ್ಲಿ ಕಾಣಿಸಿಕೊಂಡಿದ್ದರು. ಪಾಕಿಸ್ತಾನಿ ಪ್ರಜೆಯಾಗಿದ್ದ ಅವರನ್ನು 2016ರ ಉರಿ ದಾಳಿಯ ನಂತರ ಭಾರತ ಸಿನಿಮಾಗಳಿಂದ ನಿಷೇಧಿಸಲಾಗಿತ್ತು.

WhatsApp Group Join Now
Telegram Group Join Now
Share This Article
error: Content is protected !!