ಕರಾಚಿ : ಪಾಕಿಸ್ತಾನದ ವಿರುದ್ದ ಯುದ್ಧಕ್ಕೆ ವಿರೋಧ ಸೂಚಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಪಾಕಿಸ್ತಾನದ ಮಾಧ್ಯಮಗಳು ಹಾಡಿ ಹೊಗಳಿ ಕೊಂಡಾಡಿವೆ. ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಎಂ ಸಿದ್ಧರಾಮಯ್ಯ, ಭಾರತದ ಕೇಂದ್ರ ಸರ್ಕಾರದ ವೈಫಲ್ಯದಿಂದ ಪೆಹಲ್ಗಾಮ್ ದಾಳಿ ನಡೆದಿದೆ.
ಭಾರತವು ಪಾಕಿಸ್ತಾನದ ಪರ ಯುದ್ಧ ಮಾಡುವುದರಲ್ಲಿ ಅರ್ಥವಿಲ್ಲ. ಬದಲಾಗಿ ತನ್ನ ಭದ್ರತೆಯನ್ನು ಬಿಗಿಗೊಳಿಸಬೇಕು. ನಾನು ಯುದ್ಧದ ಪರ ಇಲ್ಲ. ಶಾಂತಿ ಪ್ರಿಯ ಎಂದು ಹೇಳಿದ್ದರು.
ಈ ಹೇಳಿಕೆಯನ್ನು ಉದ್ಧಸಿರುವ ಪಾಕಿಸ್ತಾನದ ಮಾಧ್ಯಮಗಳು ಸಿಎಂ ಸಿದ್ದರಾಮಯ್ಯ ಅವರ ನಿಲುವಿಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿವೆ.
ಅಲ್ಲದೇ ಈ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿಲ್ಲ. ಪೆಹಲ್ಗಾಮ್ ದಾಳಿ ಭಾರತದ ಭದ್ರತಾ ವೈಫಲ್ಯದಿಂದ ನಡೆದಿರುವ ಅವಘಡ ಎಂದು ಸ್ವತಃ ಭಾರತದ ರಾಜ್ಯವೊಂದರ ಮುಖ್ಯಮಂತ್ರಿಯೇ ಒಪ್ಪಿಕೊಂಡಿದ್ದಾರೆ ಎಂದು ಹೇಳಿದೆ.
ಪಾಕಿಸ್ತಾನದ ಮೀಡಿಯಾಗಳಲ್ಲಿ ಸಿಎಂ ಸಿದ್ದರಾಮಯ್ಯ ಹೀರೋ ಆಗುತಿದ್ದಂತೆಯೇ ಭಾರತದಲ್ಲಿ ನೆಟ್ಟಿಗರಿಂದ ಈ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ನಡೆಯನ್ನು ಖಂಡಿಸಿರುವ ನೆಟ್ಟಿಗರು ನೀವು ಭಾರತದ ಪರವೋ ಅಥವಾ ಪಾಕಿಸ್ತಾನದ ಪರವೋ ಸ್ಪಷ್ಟಪಡಿಸಿ ಎಂದು ಟೀಕಿಸಿದ್ದಾರೆ.