ಇಸ್ಲಾಮಾಬಾದ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವಿರುದ್ಧ ಸೋತು ಟೂರ್ನಿಯಿಂದಲೇ ಹೊರಬಿದ್ದಿರುವ ಪಾಕಿಸ್ತಾನ ದಿನಕ್ಕೊಂದು ವಿಚಾರವಾಗಿ ಸುದ್ದಿಗೆ ಗ್ರಾಸವಾಗುತ್ತಿದೆ. ಕ್ರಿಕೆಟ್ ವಿಚಾರವಾಗಿ ಮಾತ್ರವಲ್ಲ.. ಕ್ರಿಕಟೇತರ ವಿಚಾರವಾಗಿಯೂ ಪಾಕಿಸ್ತಾನ ಸುದ್ದಿಯಾಗುತ್ತಿದ್ದು ಈ ಬಾರಿ ಭಾರತವನ್ನು ಹಿಂದಿಕ್ಕುವ ವಿಚಾರದಲ್ಲಿ ಪಾಕಿಸ್ತಾನ ಪ್ರಧಾನಿ ಶಹಬಾಶ್ ಷರೀಫ್ ಟ್ರೋಲ್ ಗೆ ತುತ್ತಾಗಿದ್ದಾರೆ.
ಆರ್ಥಿಕ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಪಾಕಿಸ್ತಾನ ಭಾರತವನ್ನು ಮೀರಿಸಲು ವಿಫಲವಾದರೆ ತಮ್ಮ ಹೆಸರು ಬದಲಿಸಿಕೊಳ್ಳುವುದಾಗಿ ಶಹಬಾಜ್ ಷರೀಫ್ ಪ್ರತಿಜ್ಞೆ ಮಾಡಿದ್ದಾರೆ.
ಶನಿವಾರ ಪಂಜಾಬ್ನ ಡೇರಾ ಘಾಜಿ ಖಾನ್ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್, ಗಾಳಿಯಲ್ಲಿ ಮೇಜು ಗುದ್ದುತ್ತಾ ಎದೆ ಬಡಿದುಕೊಳ್ಳುತ್ತಾ ಆರ್ಥಿಕ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಪಾಕಿಸ್ತಾನ ಭಾರತವನ್ನು ಮೀರಿಸಲು ವಿಫಲವಾದರೆ ತಮ್ಮ ಹೆಸರು
ಬದಲಿಸಿಕೊಳ್ಳುತ್ತೇನೆ ಎಂದು ಹೇಳಿದರು.




