Ad imageAd image

ಪಾಕಿಸ್ತಾನವನ್ನ ಭೂಪಟದಿಂದ ಮುಕ್ತ ಗೊಳಿಸಬೇಕು : ಹಿಂದಕ್ಕೆ ಸರಿಯೋ ಮಾತಿಲ್ಲ  ರಾಜು ಕಾಗೆ ವಾಗ್ದಾಳಿ

Bharath Vaibhav
ಪಾಕಿಸ್ತಾನವನ್ನ ಭೂಪಟದಿಂದ ಮುಕ್ತ ಗೊಳಿಸಬೇಕು : ಹಿಂದಕ್ಕೆ ಸರಿಯೋ ಮಾತಿಲ್ಲ  ರಾಜು ಕಾಗೆ ವಾಗ್ದಾಳಿ
WhatsApp Group Join Now
Telegram Group Join Now

ಕಾಗವಾಡ: ಪಾಕಿಸ್ತಾನವನ್ನು ಭೂಪಟದಿಂದಲೇ ಮುಕ್ತಗೊಳಿಸಬೇಕು, ಪೆಹೆಲ್ಗಾಂ ದಾಳಿ ಹಿನ್ನೆಲೆ ಪಾಕ್ ವಿರುದ್ಧ ಕೈ ಶಾಸಕ ರಾಜು ಕಾಗೆ ಗುಡುಗಿದ್ದಾರೆ.

ಉಗ್ರಗಾಮಿಗಳ ಅಟ್ಟಹಾಸಕ್ಕೆ ಸುಮಾರು 27 ಜನರು ಅಸು ನೀಗಿದ್ದು, ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಪಾಕಿಸ್ತಾನ ಮೇಲಿಂದ ಮೇಲೆ ಭಾರೀತಿಯರ ಸಹನೆಯನ್ನ ಪರೀಕ್ಷಿಸುತ್ತಿದೆ.ಅವರ ಈ ದುಷ್ಕೃತ್ಯಕ್ಕೆ ಪಾಕಿಸ್ತಾನಕ್ಕೆ ನಮ್ಮ ಭಾರತೀಯ ಸೈನಿಕರು ತಕ್ಕ ಪಾಠ ಕಲಿಸುತ್ತಾರೆ.

ಈಗಾಗಲೇ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ರಾಜ ತಾಂತ್ರಿಕ ನಿಲುವುಗಳಿಂದಲೇ ಪಾಕಿಸ್ತಾನ ತತ್ತರಿಸಿ ಹೋಗಿದೆ. ಮನುಷ್ಯ ಮನುಷ್ಯರನ್ನು ಕೊಲ್ಲುವುದು ಎಷ್ಟು ಸರಿ ಆದ್ದರಿಂದ ನಾವೆಲ್ಲ ಭಾರತೀಯರು ಒಗ್ಗಟ್ಟಾಗಿ ಇರಬೇಕು ಇದರಲ್ಲಿ ರಾಜಕೀಯ ಮಾಡಬಾರದು.ಅವಶ್ಯಕತೆ ಬಿದ್ದಲ್ಲಿ ನಾವು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ಸಿದ್ದರಾಗಬೇಕು ಎಂದರು.

ಸಿಎಂ ಮಾತು ಟಂಗ್ ಸ್ಲಿಪ್ ಎಂದ ರಾಜು ಕಾಗೆ: ಉಗ್ರರ ದಾಳಿ ಹಿನ್ನೆಲೆ ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ದೇಶದಲ್ಲಿ ಸುದ್ದಿಯಾಗಿತ್ತು. ಅವರ ಈ ಮಾತಿನಿಂದ ಸಾಕಷ್ಟು ಭಾರತೀಯರು ಅವರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು ಇದನ್ನು ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ ನಾನು ಹಾಗೆ ಹೇಳಿಲ್ಲ ಎಂದು ಯು ಟರ್ನ್ ಹೊಡೆದಿದ್ದರು.

ಇದೇ ವಿಚಾರವಾಗಿ ಕೈ ಶಾಸಕ ರಾಜು ಕಾಗೆ ಮಾತನಾಡಿದ್ದು ಅದು ಸಿಎಂ ಟಂಗ್ ಸ್ಲಿಪ್ ನಿಂದ ಆದ ಮಾತು ಇದನ್ನು ಯಾರು ತಿರುಚುವ ಅವಶ್ಯಕತೆ ಇಲ್ಲ ನಾವೆಲ್ಲ ಭಾರತೀಯರು. ಉಗ್ರರ ಅಟ್ಟಹಾಸದಲ್ಲಿ ಮಡಿದ 27 ಜನ ಭಾರತೀಯರು ನಮ್ಮವರೇ, ನಮ್ಮ ಕುಟುಂಬ ಸದಸ್ಯರಿಗೆ ಈ ರೀತಿಯ ಗೆದ್ದರೆ ಯಾರು ಸಹಿಸುತ್ತಿರಲಿಲ್ಲ ಸಿಎಂ ಕೂಡ ಭಾರತೀಯರೇ ಅವರು ಬಾಯಿ ತಪ್ಪಿ ಅಂದ ಮಾತಿನಿಂದ ಎಲ್ಲಾ ಅವಾಂತರಗಳಾಗಿವೆ ಅದನ್ನ ಚರಿಸುವ ಅವಶ್ಯಕತೆ ಇಲ್ಲ ಎಂದರು.

ಯುದ್ಧ ನಡೆದರೆ ಭಾರತಕ್ಕೆ ಆರ್ಥಿಕ ಹಿನ್ನಡೆ ವಿಚಾರ
ಬೆಳಗಾಂ ದಲಿಬಾಲ್ ಕೇಂದ್ರ ಸರ್ಕಾರ ಹಲವು ರಾಜ ತಾಂತ್ರಿಕ ನಿಲುವುಗಳನ್ನು ತೆಗೆದುಕೊಂಡು ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸುತ್ತಿದೆ. ಅದರಲ್ಲೂ ಈಗಾಗಲೇ ಸೇನಾ ತುಕುಡಿಗಳು, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವ ಎಲ್ಲಾ ತಯಾರಿಗಳಲ್ಲಿ ತೊಡಗಿದೆ. ಈ ಹಿನ್ನೆಲೆಯಲ್ಲಿ ತೆರೆಮರೆಯಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ಭಾರತ ಪಾಕಿಸ್ತಾನ ಯುದ್ಧ ನಡೆದರೆ ಭಾರತಕ್ಕೆ ಎಷ್ಟು ಹಾನಿಯಾಗಬಹುದು ಹಾಗೂ ಏನೆಲ್ಲ ಪರಿಣಾಮ ಬೀಳಬಹುದು ಎಂಬ ಚರ್ಚೆಗೆ ಶಾಸಕ ರಾಜು ಕಾಗೆ ಪ್ರತಿಕ್ರಿಯೆ ನೀಡಿದ್ದು.

ನಮ್ಮ ದೇಶ ಆರ್ಥಿಕವಾಗಿ ಹಿನ್ನಡೆ ಯಾಗುತ್ತದೆ ಎಂದು ಸುಮ್ಮನಿರುವಷ್ಟು ನಾವು ಹೇಡಿಗಳಲ್ಲ. ಉಗ್ರಗಾಮಿಗಳ ಅಟ್ಟಹಾಸಕ್ಕೆ ನಮ್ಮ ದೇಶದ 27 ಜನ ಬಲಿಯಾಗಿದ್ದಾರೆ. ಅವರ ಪ್ರಾಣಕ್ಕೆ ಪಾಕಿಸ್ತಾನ ತಕ್ಕ್ ಬೆಲೆ ತೆರೇಲೇಬೆಕು ಎಂದರು.

ವರದಿ : ಅಜಯ್ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!