Ad imageAd image

ಪಲಶ್ರುತಿ ಒಂದು ವರ್ಷದ ನೀರಿನ ಸಂಪರ್ಕದ ಸಮಸ್ಯೆಗೆ ಕೇವಲ 1 ತಿಂಗಳಲ್ಲಿ ಮುಕ್ತಿ

Bharath Vaibhav
ಪಲಶ್ರುತಿ ಒಂದು ವರ್ಷದ ನೀರಿನ ಸಂಪರ್ಕದ ಸಮಸ್ಯೆಗೆ ಕೇವಲ 1 ತಿಂಗಳಲ್ಲಿ ಮುಕ್ತಿ
WhatsApp Group Join Now
Telegram Group Join Now

Mk ಹುಬ್ಬಳ್ಳಿ:- ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ Mk ಹುಬ್ಬಳ್ಳಿ ಪಟ್ಟಣದ ಹೊರವಲಯದ ಬೈ ಪಾಸ್ ರಸ್ತೆಯಲ್ಲಿರುವ ಪಶು ಆರೋಗ್ಯ ಕೇಂದ್ರ ಹಾಗೂ ಕೋಡ್ ನಂಬರ್ 236 ಅಂಗನವಾಡಿ ಕೇಂದ್ರಕ್ಕೆ 1 ವರ್ಷವಾದ್ರೂ ನೀರು ಸಂಪರ್ಕ ಕೊಟ್ಟಿರಲಿಲ್ಲ, ಇದರಿಂದ ಈ ಭಾಗದ ಸ್ಥಳೀಯರು ಹಾಗೂ ಸಿಬ್ಬಂದಿಗಳ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದರು.

ಸದರಿ ಈ ವರದಿ ಗಮನಿಸಿ ಈ ಸಮಸ್ಯೆಯ ಬಗ್ಗೆ ಕ್ರಮ ಗೊಳ್ಳುವುದಕ್ಕೆ ಕಿರಿಯ ಅಭಿಯಂತರ ರಾಜಶೇಖರ ಪಟ್ಟಣ ಶೆಟ್ಟಿ ಹಾಗೂ ನಿಕಟ ಪೂರ್ವ ಮುಖ್ಯ ಅಧಿಕಾರಿಗಳು ಆದ ರವಿ ಬಾಗಲಕೋಟೆ ಅವರು ತುರ್ತಾಗಿ ಈ ಸಮಸ್ಯೆಯ ಬಗ್ಗೆ ಕ್ರಮ ಕೈ ಗೊಂಡಿದ್ದರು. ಕೊನೆಗೂ ಈ ಎರಡು ಸರ್ಕಾರಿ ಕಚೇರಿಗಳಿಗೆ ನೀರಿನ ಸಂಪರ್ಕ ಕಲ್ಪಿಸುವುದಕ್ಕೆ ಪ್ರಯತ್ನ ಪಟ್ಟು ವರದಿ ಮಾಡಿ ಸಫಲತೆ ಕಂಡ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿ ಕೊಟ್ಟಾಗ ಪಶು ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಸಿಬ್ಬಂದಿಗಳು ನಮ್ಮ ನ್ಯೂಸ್ ಸಮೂಹಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇನ್ನೂ ಸಾರ್ವಜನಿಕ ವಲಯದಲ್ಲಿ ಶ್ಲಾಘನೀಯ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

ವರದಿ:-ಬಸವರಾಜು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!