ಪಾವಗಡ : ತಾಲೂಕಿನ ಕರಿಯಮ್ಮನ ಪಾಳ್ಯ ಗ್ರಾಮದಲ್ಲಿ ಕೆ .ಪಿ .ಎಲ್. ಪ್ರೀಮಿಯರ್ ಲೀಗ್ ನಾಲ್ಕನೇ ವರ್ಷದ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮವನ್ನು ಪಾಳೇಗಾರ್ ಲೋಕೇಶ್ ಉದ್ಘಾಟಿಸಿ ಮಾತನಾಡಿ ಯುವಕರು ಕ್ರೀಡೆಯಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು ಯುವಕರ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯ ಹಚ್ಚುತ್ತದೆ ಇಂದಿನ ಗ್ರಾಮೀಣ ಕ್ರೀಡಾಪಟುಗಳು ರಾಜ್ಯಾ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆಯುವ ಅವಕಾಶಗಳು ದೊರೆಯಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಅಂಜನ್ ನಾಯಕ ಮಾತನಾಡಿ ಗ್ರಾಮೀಣ ಪ್ರದೇಶದ ಯುವಕರು ಕ್ರಿಕೆಟ್ ಜೊತೆ ಗ್ರಾಮದ ಅಭಿವೃದ್ಧಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಜಾಗ್ರತೆ ವೇದಿಕೆಯ ಭಾಸ್ಕರ್ ನಾಯಕ. ವಕೀಲರಾದ ಮಾರ ನಾಯಕ. ಗ್ರಾಮದ ಮುಖಂಡರಾದ ಓಂಕಾರ ನಾಯಕ. ಚಿನ್ನಪ್ಪ. ನಾಗರಾಜು. ಬಂಗ್ಯಪ್ಪ. ಅಂಜಿ ನಾಯಕ. ಸ್ವಾಮೀಜಿ ಮಾರುತಿ. ಶ್ರೀ ರಾಮ್ ನಾಯಕ. ಯೋಗಿ ಜಯಣ್ಣ .ಶ್ರೀನಾಥ್ ಹೇಮಂತ್. ಹನುಮ ಕುಮಾರ್. ರಮೇಶ್ ನಾಯಕ. ಗೋಪಾಲ್ ನಾಯಕ .ಮಾರುತಿ ನಾಗರಾಜ್. ಸಣ್ಣ ನಾಯಕ. ಹಾಗೂ ಗ್ರಾಮದ ನಾಲ್ಕು ತಂಡಗಳ ಆಟಗಾರರು ಭಾಗವಹಿಸಿದ್ದರು.
ವರದಿ : ಶಿವಾನಂದ ಪಾವಗಡ




