Ad imageAd image

ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಪಮ್ಮಾರ ನೇಮಕ

Bharath Vaibhav
ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಪಮ್ಮಾರ ನೇಮಕ
WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ಇಳಕಲ್ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪರಶುರಾಮ ಎಸ್ ಪಮ್ಮಾರ ಆಯ್ಕೆಯಾಗಿದ್ದಾರೆ.ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ರವರು ಸಂಘದ ಬೈಲಾ ನಿಯಮಗಳನ್ವಯ ರಾಜ್ಯದ ನೌಕರರ ಸಂಘಟನೆಯನ್ನು ಬಲಪಡಿಸಲು ಸೂಚಿಸಿ ಪ್ರಮಾಣಪತ್ರ ವಿತರಿಸಿ ಗೌರವಿಸಿದ್ದಾರೆ.

ಸತತವಾಗಿ ಎರಡನೇ ಅವಧಿಗೆ ಇಳಕಲ್ ತಾಲೂಕು ಅಧ್ಯಕ್ಷರಾಗಿ ಕ್ರೀಯಾಶೀಲ ಸಂಘಟನೆ ಮಾಡುತ್ತಿರುವ ಪಮ್ಮಾರ ರವರ ನೇಮಕವನ್ನು ಸಂಘದ ಪದಾಧಿಕಾರಿಗಳು,ವಿವಿಧ ಸಂಘಟನೆಗಳ ಪದಾಧಿಕಾರಿಗಳು,ಸರ್ಕಾರಿ ನೌಕರರು ಹರ್ಷ ವ್ಯಕ್ತಪಡಿಸಿ ಶುಭಾಶಯ ತಿಳಿಸಿದ್ದಾರೆ.

ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನಡೆದ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಕಾರ್ಯಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ,ಸಂಜೀವ ಸತ್ಯರಡ್ಡಿ,ಗೋಪಾಲ ನೀಲನಾಯಕ ಹಾಗೂ ಇಳಕಲ್ ತಾಲೂಕಿನ ಪದಾಧಿಕಾರಿಗಳಾದ ಈಶ್ವರ ಗಡ್ಡಿ,ಎಸ್ ಜಿ ಬಂಗಾರಿ,ಶರಣು ಕೊಣ್ಣೂರ,ಅನಿತ್ ನಾಯಕ ಹಾಗೂ ಕುಬೇರ ಹೊಂಗಲ್ ಉಪಸ್ಥಿತರಿದ್ದು, ಪಮ್ಮಾರ ರವರನ್ನು ಗೌರವಿಸಿ ಶುಭ ಕೋರಿದ್ದಾರೆ.

ವರದಿ :ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!