ನಿಪ್ಪಾಣಿ: ನಿಪ್ಪಾಣಿ ತಾಲೂಕಿನ ಧರ್ಮನಗರಿ ಶಿರದವಾಡ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಆಚಾರ್ಯ ಶ್ರೀ ವರ್ಧಮಾನಸಾಗರ ಧರ್ಮಸಾಗರ ಸೇರಿದಂತೆ 24 ಮನಿಗಳ ಮಂಗಲ ಪ್ರವೇಶದೊಂದಿಗೆ ಬೆಳಿಗ್ಗೆ ಇಂದ್ರ ಪ್ರತಿಷ್ಠೆ ಕಂಕಣಬಂಧನ ಮಂಗಲ ಧ್ವಜಾರೋಹನ, ಮಂಟಪ ಉದ್ಘಾಟನೆ, ಮಂಗಲ ಕಲಶ ಸ್ಥಾಪನೆ, ಅಖಂಡ ದೀಪಸ್ಥಾಪನೆ, ಮಂಗಲಕುಂಭನಯನ, ಪಂಚಾಮೃತ ಅಭಿಷೇಕ, ಮಹಾಶಾಂತಿಧಾರಾ, ಪೀಠಾ ರಾಧನೆ ಮಧ್ಯಾಹ್ನ ಮುನಿ ಸಂಘಗಳಿಂದ ಪ್ರವಚನ, ಮೂರ್ತಿ ಪ್ರತಿಷ್ಠಾಪನೆ, ಸುವರ್ಣ ಸೌಭಾಗ್ಯವತಿಯರಿಂದ ಪಂಚ ಕುಂಭವಿನ್ಯಾಸ,ಮುಂತಾದ ಪೂಜಾ ವಿಧಿಗಳು ಸಂಪನ್ನಗೊಂಡವು.
ಸಾವಿರಾರು ಸಮಸ್ತ ಜೈನ ಶ್ರಾವಕ ಶ್ರಾವಕಿಯರ ಉಪಸ್ಥಿತಿಯಲ್ಲಿ ಗ್ರಾಮದ ಜಿನಮಂದಿರದಿಂದ ವಿವಿಧ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆಯ ಮುಖಾಂತರ 1008 ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆ ಪ್ರತಿಷ್ಠಾನ ನಡೆಯಿತು. ಬೆಳಿಗ್ಗೆ ಜಿನಮಂದಿರದಿಂದ ಸಭಾಮಂಟಪಕ್ಕೆ ಮೆರವಣಿಗೆ ಆಗಮಿಸುತ್ತಿದ್ದಂತೆ ಧರ್ಮಾನುರಾಗಿ ಸೌ ಮಂಗಲ್ ಮಹಾವೀರ ಪಾಟೀಲ ದಂಪತಿಗಳಿಂದ ವಿಧಿಪೂರ್ವಕ ಧರ್ಮ ದ್ವಜಾರೋಹನ ನಡೆದು ತದನಂತರ ಮುನಿಗಳ ದಿವ್ಯ ಸಾನಿಧ್ಯದಲ್ಲಿ ಧರ್ಮಾನುರಾಗಿ ದೀಪಾಲಿ ಸಚಿನ್ ಮಗದುಮ್ ದಂಪತಿಗಳಿಂದ ಮುಖ್ಯ ಸಭಾ ಮಂಟಪದ ಉದ್ಘಾಟನೆಯಾಯಿತು.
ನಂತರ ರೋಹಿಣಿ ಸುನಿಲ್ ಅಕಿವಾಟೆ ದಂಪತಿಗಳಿಂದ ಮಂಗಲ ಕಲಶ ಸ್ಥಾಪನೆ ಕಾರ್ಯಕ್ರಮಗಳು ಜರುಗಿದವು. ಪಂಚಕಲ್ಯಾಣ ಪೂಜಾ ಮಹೋತ್ಸವದ ಪ್ರಾರಂಭದ ದಿನವಾದ ಸೋಮವಾರ ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ, ಯುವ ನಾಯಕ ಉತ್ತಮ ಪಾಟೀಲ ಲಕ್ಷ್ಮಣರಾವ ಚಿಂಗಳೇ ಮಾಜಿ ಸಚಿವ ವೀರಕುಮಾರ ಪಾಟೀಲ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅನ್ನಾಸಾಹೇಬ ಹವಲೇ ಕಿರಣ ರಜಪೂತ ನಿಪ್ಪಾಣಿ ಪಟ್ಟಣದ ಶಹಾ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ಮಹಾವೀರ ಚಿಂಚಣೆ