ನಿಪ್ಪಾಣಿ: ಹೌದು ಕೊಲ್ಲಾಪುರ ಜಿಲ್ಲೆ ಶಿರೋಳ ತಾಲೂಕಿನ ಜಿನಧರ್ಮೀಯರ ಪಾವನ ಕ್ಷೇತ್ರ ನಾಂದನಿಯಲ್ಲಿ ಪರಮಪೂಜ್ಯ ಗಣಾಚಾರ್ಯ 108 ವಿರಾಗಸಾಗರಜಿ ಮುನಿಸೇರಿ ಒಂಬತ್ತು ಮುನಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯರ ನೇತೃತ್ವದಲ್ಲಿ ಬರುವ ಜನವರಿ ಒಂದರಿಂದ ಒಂಬತ್ತು 2025ರ ವರೆಗೆ ಪಂಚಕಲ್ಯಾಣ ಪ್ರತಿಷ್ಠೆ ಹಾಗೂ 31 ಅಡಿ ಎತ್ತರದ ಭಗವಾನ್ ಆದಿನಾಥ ತೀರ್ಥಂಕರರ ನಯನ ಮನೋಹರ ಬ್ರಹನ್ ಮೂರ್ತಿಗೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆಯಲಿದ್ದು ಸದರಿ ಕಾರ್ಯಕ್ರಮಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿ ಮೂರು ಲಕ್ಷಕ್ಕೂ ಅಧಿಕ ಶ್ರಾವಕ ಶ್ರಾವಕಿಯರು ಉಪಸ್ಥಿತರಿರುತ್ತಾರೆಂದು ನಾಂದನಿ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಗಳು ತಿಳಿಸಿದರು. ನಿಪ್ಪಾಣಿ ತಾಲೂಕಿನ ಬೋರಗಾವ ಪಟ್ಟಣದ ಅರಿಹಂತ್ ಬ್ಯಾಂಕಿನ ಸಭಾಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಿರಂತರ 9 ದಿನಗಳವರೆಗೆ ನಡೆಯಲಿರುವ ಪಂಚಕಲ್ಯಾಣ ಪೂಜೆ ಹಾಗೂ ಮಹಾಮಸ್ತಕಾಭಿಷೇಕದಲ್ಲಿ ದಿನನಿತ್ಯ ನಿತ್ಯವಿಧಿ, ಲಘು ಶಾಂತಿಕ,ಪೀಠಾರೋಹಣ, ಆಚಾರ್ಯರ ಮಂಗಲ ಪ್ರವಚನ, ಮೆರವಣಿಗೆ,ಬಾಲಕ ಜನ್ಮಾಭಿಷೇಕ,ರಾಜ್ಯಾಭಿಷೇಕ,ಮುಂಜಿ ಬಂಧನ,ಸಮವಸರಣ,ಭಕ್ತಾ0ಬರ ವಿಧಾನ,ಪುಷ್ಪವೃಷ್ಠಿ, ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕ ಸೇರಿ ಅನೇಕ ಧಾರ್ಮಿಕ ಕೈಂಕರ್ಯಗಳು ನಡೆಯಲಿದ್ದು ಸಮಸ್ತ ಶ್ರಾವಕ, ಶ್ರಾವಕೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುಣಿತರಾಗಬೇಕೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಯುವ ನಾಯಕ ಉತ್ತಮ ಪಾಟೀಲ, ಬಾಳಾಸಾಹೇಬ ಪಾಟೀಲ, ಮಾತನಾಡಿದರು.ಸಾಗರ ಸಂಭೊಶೇಟೆ,ಇಂದ್ರಜಿತ್ ಪಾಟೀಲ, ಅಪ್ಪಾ ಭಗಾಟೆ, ಸಂಜಯ ಬೋರಗಾವೆ,ಜಿನೇಶ್ವರ ಜುಗಳೇ,ರಾಜು ನರದೆ,ನಾಭಿರಾಜ ಖೋತ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ.