ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಪಟ್ಟಣ ಪಂಚಾಯತ್ 9ನೇ ವಾರ್ಡಿನ ಮಹಿಳೆಯರು ಮತ್ತು ನವ ಭಾರತ ಹಿಂದೂ ದಲಿತ ಸಂಘ ಹಾಗೂ ಜೈ ಭೀಮ ಯುವ ಸೇನೆ ಹಟ್ಟಿ ಮುಖಂಡರಿಂದ ಹಟ್ಟಿ ಪಟ್ಟಣ ಪಂಚಾಯತಿ ಮುತ್ತಿಗೆ ಹಾಕಿದರು, ಹಲವಾರು ವರ್ಷಗಳಿಂದ 9ನೇ ವಾರ್ಡಿನಲ್ಲಿ ಅಭಿವೃದ್ಧಿ ಕಾಣದೆ ರಸ್ತೆ, ಚರಂಡಿ, ಕುಡಿಯುವ ನೀರು ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ,ಕಳೆದ ತಿಂಗಳಿನಿಂದ ಧಾರಾಕಾರವಾಗಿ ಸುರಿದ ಮಳೆಯಿಂದ ಇರುವಂತ ಮಣ್ಣಿನ ರಸ್ತೆ ಸಂಪೂರ್ಣ ಗದ್ದೆಯಂತಾಗಿದು ದಿನನಿತ್ಯ ಒಂಬತ್ತನೆಯ ವಾರ್ಡಿನಲ್ಲಿ ವಾಸ ಮಾಡುವ ಜನರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಈ ವಾರ್ಡಿನ ಸದಸ್ಯರು ಯಾವುದೇ ರೀತಿಯ ಗಮನ ಹರಿಸದ ಕಾರಣ ಬೇಸತ್ತ ವಾರ್ಡಿನ ಜನ ಮಹಿಳೆಯರು ಇಂದು ಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಇವರಿಗೆ ತಮ್ಮ ಸಮಸ್ಯೆಗಳನ್ನು ಹೇಳುವ ಮೂಲಕ ತರಟೆಗೆ ತೆಗೆದುಕೊಂಡರು ಇಷ್ಟು ವರ್ಷಗಳಾದರೂ ನಮ್ಮ ವಾರ್ಡಿಗೆ ಸರಿಯಾಗಿ ರಸ್ತೆ ಕುಡಿಯುವ ನೀರು ಚರಂಡಿ ವ್ಯವಸ್ಥೆ ಕಲ್ಪಿಸಿರುವುದಿಲ್ಲ ಕೂಡಲೇ ಅವುಗಳನ್ನೆಲ್ಲ ಸರಿಪಡಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು, ಅವರ ಮನವಿಗೆ ಸ್ಪಂದಿಸಿದ ಹಟ್ಟಿ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ಜಗನ್ನಾಥ್ ತಾತ್ಕಾಲಿಕವಾಗಿ ರಸ್ತೆಯ ತೆಗ್ಗು ಗುಂಡಿಗೆ ಮರ್ಮ ಹಾಕಲಾಗುವುದು ಮತ್ತು ಸಂಬಂಧಪಟ್ಟ ವಾರ್ಡಿನ ಸದಸ್ಯರ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಿಕೊಡಲಾಗುವುದೆಂದು ಭರವಸೆ ನೀಡಿದರು
ಈ ಸಂದರ್ಭದಲ್ಲಿ ನವ ಭಾರತ ಇಂದು ದಲಿತ ಸಂಘ ದ ಜಿಲ್ಲಾಧ್ಯಕ್ಷರಾದ ವಿನೋದ್ ಕುಮಾರ, ತಾಲೂಕು ಅಧ್ಯಕ್ಷರಾದ ವೆಂಕಟೇಶ್ ( ಗಿರಿ ), ಕಾರ್ಯದರ್ಶಿಯಾದ ವೆಂಕೋಬ ಪಾವಡೆ ಹಟ್ಟಿ, ಭೀಮ್ ರಾಯ ಭಜಂತ್ರಿ ಮತ್ತು ಜೈ ಭೀಮ ಯುವಸೇನೆ ಹಟ್ಟಿ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಸುರೇಶ್ ಮಾಚನೂರ್, ಲಾಲ್ ಪೀರ್, 9ನೇ ವಾರ್ಡಿನ ನಿವಾಸಿಗಳಾದ ಮಹಮ್ಮದ್ ರಫಿ, ರಿಯಾಜ್, ಮತ್ತು ಮಹಿಳೆಯರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಮಧುಶ್ರೀ




