ನಿಪ್ಪಾಣಿ : ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಮೀಸಲಾತಿ ಪಡೆಯುವವರೆಗೆ ವಿಶ್ರಾಂತಿ ಇಲ್ಲ. ಪರಮಪೂಜ್ಯ ಬಸವ ಮೃತ್ಯುಂಜಯ ಸ್ವಾಮೀಜಿಯಿಂದ ಎಚ್ಚರಿಕೆ.
ಬೇಡಕಿಹಾಳ ದಲ್ಲಿ ಪೂರ್ವಭಾವಿ ಸಭೆ ಅಂಕರಿಂಗ್ – ಹೌದು ಮೀಸಲಾತಿ ಹೋರಾಟದ ಮೂಲಕವೇ ಆಯ್ಕೆಯಾದ ಶಾಸಕರಿಂದು ಆಮಿಷಕ್ಕೆ ಒಳಗಾಗಿದ್ದಾರೆ. ಸಮಾಜದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಒಗ್ಗಟ್ಟಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಕಳೆದ ಸಲ ಬಿಜೆಪಿ ಸರ್ಕಾರದಿಂದ ಕೊನೆಯ ಗಳಿಗೆಯಲ್ಲಿ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಪ್ರವರ್ಗ 2ಬಿ ಮೀಸಲಾತಿ ನೀಡಿದರು. ಅದಕ್ಕೂ ಸಹ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮಾನ್ಯತೆ ನೀಡಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ಹೋರಾಟ ನಡೆಸುತ್ತಿದ್ದೇನೆ. ಇನ್ನು ಮುಂದೆ ಮೀಸಲಾತಿ ಪಡೆಯುವವರೆಗೆ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ಸರಕಾರಕ್ಕೆ ಎಚ್ಚರಿಸಿದರು. ಈ ಹಿನ್ನೆಲೆಯಲ್ಲಿ ಬರುವ ಡಿಸೆಂಬರ್ 10ರಂದು ಬೆಳಗಾವಿಯ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತಿದ್ದು ತಾವೆಲ್ಲರೂ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸಬೇಕೆಂದು ಕೂಡಲಸಂಗಮ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು. ನಿಪ್ಪಾಣಿ ತಾಲೂಕು ಬೆಡಕಿಹಾಳ ಗ್ರಾಮದ ಕಲ್ಯಾಣ ಸಿದ್ದೇಶ್ವರ ಸಭಾಭವನದಲ್ಲಿ ಸೋಮವಾರ ಸಂಜೆ ಲಿಂಗಾಯತ ಸಮಾಜದ ವತಿಯಿಂದ ಏರ್ಪಡಿಸಿದ್ದ ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ಹಾಗೂ ಲಿಂಗಾಯತ ಉಪ ಸಮಾಜಗಳಿಗೆ ಓಬಿಸಿ ಮೀಸಲಾತಿ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಲಿಂಗಾಯಿತ ಸಮಾಜದ ಪ್ರಮುಖರಾದ ಸಂಜಯ್ ಕಮತೆ, ರಮೇಶ್ ಪಾಟೀಲ್ ಹಾಗೂ ಸುರೇಶ್ ದೇಸಾಯಿ ಮಾತನಾಡಿ “ಲಿಂಗಾಯತ ಸಮಾಜದ ಮಕ್ಕಳ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿಗಾಗಿ ಜಗದ್ಗುರುಗಳು ಕಳೆದ ನಾಲ್ಕು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದು ಬರುವ ಡಿಸೆಂಬರ್ ಹತ್ತರಂದು ಬೆಳಗಾವಿಯ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದು ಸಾವಿರಕ್ಕೂ ಅಧಿಕ ಲಿಂಗಾಯತ್ ಸಮಾಜ ಬಾಂಧವರು ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಕ್ಕೊಳ ಗ್ರಾಮದ ಪ್ರಜ್ವಲ ಕರಂಬಳೆ ಎತ್ತರ ಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರಿಂದ ಶ್ರೀಗಳಿಂದ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಬೇಕೇ ಬೇಕು ಮೀಸಲಾತಿ ಬೇಕು ಎಂಬ ಘೋಷಣೆಯೊಂದಿಗೆ ಬಸವ ಮೃತ್ಯುಂಜಯ ಸ್ವಾಮಿಗಳನ್ನು ಸಿದ್ದೇಶ್ವರ ಮಂದಿರಕ್ಕೆ ಬರಮಾಡಿಕೊಳ್ಳಲಾಯಿತು.ಸಭೆಯಲ್ಲಿ ಕಿರಣ್ ಪಾಂಗಿರೆ ರಾಜೇಂದ್ರ ಹಣಬರಟ್ಟಿ ,ಅನಿಲ್ ದೇಶಪಾಂಡೆ ,ಸಂದೀಪ್ ಪಾಟೀಲ್ ,ಶಿವರಾಜ್ ಚೌಗಲೆ, ದಯಾನಂದ ಸುಬೇದಾರ್ ಅಶೋಕ್ ಸುಬೇದಾರ್ ಚಂದ್ರಕಾಂತ್ ಕುಂಬಾರ್ ಸೇರಿದಂತೆ ಶಮನೇವಾಡಿ ಗಳತಗಾ, ಸದಲಗಾ,ಭೋಜ ಗ್ರಾಮಗಳಿಂದ ಲಿಂಗಾಯತ ಬಾಂಧವರು ಆಗಮಿಸಿದ್ದರು. ಆರ್ ಬಿ ಮಲ್ಕಾಪುರೆ ಸ್ವಾಗತಿಸಿದರು ಶ್ರೀಧರ್ ಕಮತೆ ವಂದಿಸಿದರು.
ಮಹಾವೀರ ಚಿಂಚಣೆ