Ad imageAd image

ಪಂಚಮಸಾಲಿ ಮೀಸಲು ಆಗ್ರಹ ಪತ್ರ ಚಳವಳಿಗೆ ಚಾಲನೆ

Bharath Vaibhav
ಪಂಚಮಸಾಲಿ ಮೀಸಲು ಆಗ್ರಹ ಪತ್ರ ಚಳವಳಿಗೆ ಚಾಲನೆ
WhatsApp Group Join Now
Telegram Group Join Now

ಹುಬ್ಬಳ್ಳಿ: -ಮೀಸಲಾತಿ ಹಕ್ಕನ್ನು ಸರ್ಕಾರಕ್ಕೆ ಪ್ರತಿಪಾದಿಸುವಂತೆ ಶಾಸಕರಿಗೆ ಹಕ್ಕೊತ್ತಾಯಿಸಲು ಪಂಚಮಸಾಲಿ ಆಗ್ರಹ ಪತ್ರ ಚಳವಳಿಗೆ ನಗರದಲ್ಲಿಂದು ಚಾಲನೆ ದೊರೆಯಿತು.ಇಲ್ಲಿನ ಮಂಜುನಾಥ ನಗರದಲ್ಲಿರುವ ಕುಂದಗೋಳ ಶಾಸಕ ಎಂ.ಆರ್.ಪಾಟೀಲ್ ಅವರ ನಿವಾಸಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿದ ಪಂಚಮಸಾಲಿ ಪೀಠದ ಬಸವಜಯ ಮೃತೃಂಜಯ ಸ್ವಾಮೀಜಿ ಶಾಸಕರಿಗೆ ಮನವಿ ಸಲ್ಲಿಸಿ ಮಳೆಗಾಲದ ಅಧಿವೇಶನದಲ್ಲಿ ಸಮಾಜದ ಎಲ್ಲ ಶಾಸಕರು ಒಕ್ಕೊರಲಿನಿಂದ ಮೀಸಲಾತಿಗಾಗಿ ಧ್ವನಿ ಎತ್ತಿ ಹಕ್ಕೊತ್ತಾಯ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿನ ಸುಮಾರು ೨೦ ಶಾಸಕರ ಮನೆಗಳಿಗೆ ತೆರಳಿ ಈ ಅಭಿಯಾನ ನಡೆಸಲಾಗುವುದು, ಈಗಾಗಲೇ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಒತ್ತಾಯಿಸಲಾಗಿದೆ.ಇನ್ನುಳಿದವರ ನಿವಾಸಕ್ಕೆ ತೆರಳಿ ಹಕ್ಕೊತ್ತಾಯಕ್ಕೆ ಒತ್ತಾಯಿಸಲಾಗುವುದು. ಈಗಾಗಲೇ ೨ ಡಿ ಮೀಸಲಾತಿ ನೀಡಿದ್ದು, ನಮಗೆ ೨ ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಚನ್ನಬಸಪ್ಪ ಬಾಗೇವಾಡಿ, ಪ್ರದೀಪ ಪಾಟೀಲ, ಚಂಬಣ್ಣ ಹಾಳದೋಟರ, ದ್ಯಾಮನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಸದುಗೌಡ ಪಾಟೀಲ, ಅಡಿವೆಪ್ಪ ಸಲಕಿ, ಶಿವರಾಜಗೌಡ ಶಿವನಗೌಡರ, ಸಂಗನಗೌಡ ಹೂರಣ್ಣವರ, ಉಮೇಶ ಹುರಕಡ್ಲಿ, ನಂದಕುಮಾರ ಪಾಟೀಲ, ವಿರುಪಾಕ್ಷಿ ಬೀಳಗಿ, ಸುರೇಶ ಸಂಗಣ್ಣವರ, ನಿಂಗನಗೌಡ ಹಳೇಮನಿ, ಈಶ್ವರ ಶಿರಸಂಗಿ, ಶಶಿ ಖರ ಡಂಗನವರ, ಜಿ.ಜಿ.ದ್ಯಾವನಗೌಡ್ರ, ದೀಪಾ ಗೌರಿ, ಮೈಲಾರಿ ಧಾರವಾಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ವರದಿ:-ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!