Ad imageAd image

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಮಾರ್ಗದರ್ಶನ ಬಿಜೆಪಿ ಪಕ್ಷ ಸಂಘಟನೆಗೆ ಬಲ : ಪ್ರಕಾಶ ಖಂಡ್ರೆ

Bharath Vaibhav
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಮಾರ್ಗದರ್ಶನ ಬಿಜೆಪಿ ಪಕ್ಷ ಸಂಘಟನೆಗೆ ಬಲ : ಪ್ರಕಾಶ ಖಂಡ್ರೆ
WhatsApp Group Join Now
Telegram Group Join Now

ಭಾಲ್ಕಿ : ಪಟ್ಟಣದ ಹೊರವಲಯದಲ್ಲಿರುವ ಸನ್ಮುಕಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026 ಪ್ರಶಿಕ್ಷಣ ವರ್ಗ ಮತ್ತು ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ ರವರು ಉದ್ಘಾಟಿಸಿದರು, ಉದ್ಘಾಟನೆ ಮಾಡಿ ಮಾತನಾಡಿದ ಪ್ರಕಾಶ ಖಂಡ್ರೆ ರವರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರವರು ಪ್ರಾರಂಭಿಸಿದ ಈ ಪ್ರಶಿಕ್ಷಣ ವರ್ಗ ಅವರು ಹಾಕಿ ಕೊಟ್ಟ ದಾರಿಯಲ್ಲಿ ನಿರಂತರವಾಗಿ ಬಿಜೆಪಿ ಪ್ರಶಿಕ್ಷಣ ವರ್ಗಗಳನ್ನು ನಡೆಸಿಕೊಂಡು ಬಂದಿದೆ.

ಈ ಪ್ರಶಿಕ್ಷಣ ವರ್ಗದ ಉದ್ದೇಶ ವ್ಯಕ್ತಿ ನಿರ್ಮಾಣ, ಆ ವ್ಯಕ್ತಿ ಗಳಿಂದ ರಾಷ್ಟ್ರ ನಿರ್ಮಾಣ, ಅವರಲ್ಲಿ ದೇಶ ಭಕ್ತಿ ಮೂಡಿಸುವ ಈ ಪ್ರಶಿಕ್ಷಣ ವರ್ಗದಲ್ಲಿ ಬೂತ್ ಅಧ್ಯರಿಂದ ಮೇಲ್ಪಟ್ಟು ಪಕ್ಷದಲ್ಲಿ ಜವಾಬ್ದಾರಿ ಹೊಂದಿರುವ ಪ್ರತಿಯೊಬ್ಬರು ತಪ್ಪದೆ ಭಾಗವಹಿಸಬೇಕೆಂದು ಸಲಹೆ ನೀಡಿದರು, ಜೊತೆಗೆ ಪಕ್ಷದ ಸಿದ್ಧಾಂತ, ಸಂಘಟನೆಯ ಕುರಿತು ರಾಷ್ಟ್ರಾಧ್ಯಕ್ಷರಾದ ನಿತಿನ್ ನಬಿನ್ ರವರು ಮತ್ತು ರಾಜ್ಯಾಧ್ಯಕ್ಷರಾದ ವಿಜಯೇಂದ್ರ ರವರು ನೀಡುವ ಕಾರ್ಯಕ್ರಮಗಳು ಜಿಲ್ಲಾಧ್ಯಕ್ಷರಾದ ಸೋಮನಾಥ್ ಪಾಟೀಲ್ ರವರು ನೀಡುವ ಕಾರ್ಯಕ್ರಮಗಳು, ಮಂಡಲ ವತಿಯಿಂದ ಎಲ್ಲರು ಸಂಘಟಿತರಾಗಿ ಮಾಡುತ್ತ ಭಾಲ್ಕಿ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠ ಮಾಡುತ್ತಾ, ಮುಂಬರುವ ಗ್ರಾಮ ಪಂಚಾಯತ್, ತಾಲೂಕಾ ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ, ಎಲ್ಲರು ಶ್ರಮ ವಹಿಸಿ ಅತಿ ಹೆಚ್ಚು ಸ್ಥಳಗಳಲ್ಲಿ ಬಿಜೆಪಿ ಯ ಅಭ್ಯರ್ಥಿಗಳನ್ನು ಗೆಲ್ಲಿಸಿ, ಕಾರ್ಯಕರ್ತರಿಗೆ ಜನಸೇವೆ ಮಾಡಲು ಅಧಿಕಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ನುಡಿದರು.

ಮತ್ತು 2047 ರ ವರೆಗೆ ಭಾರತವನ್ನು ವಿಕಸಿತ ಭಾರತ ಮಾಡುವ ಸಂಕಲ್ಪವನ್ನು ಮಾಡಿರುವ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ರವರ ಸಂಕಲ್ಪವನ್ನು ನಾವುಗಳೆಲ್ಲರೂ ಶ್ರಮ ವಹಿಸಿ ಸಾಕಾರ ಮಾಡಬೇಕಾಗಿದೆ ಎಂದು ನುಡಿದರು. ಮಂಡಲ ಅಧ್ಯಕ್ಷರಾದ ವೀರಣ್ಣ ಕಾರಬಾರಿ ರವರು ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿ ಈ ಪ್ರಶಿಕ್ಷಣ ವರ್ಗ ಮೂರು ವರ್ಗಗಳಾಗಿ ಮೂರು ಕಡೆಗಳಲ್ಲಿ 24 ಗಂಟೆಗಳ ಕಾಲ ಜರುಗಲಿದೆ, ಒಂದೊಂದು ವರ್ಗದಲ್ಲಿ ಗರಿಷ್ಠ 90 ಬೂತ್ ಗಳು ಮಾತ್ರ ಇರಬೇಕು, ಅದಕ್ಕಿಂತ ಜಾಸ್ತಿ ಬೂತ್ ಗಳು ಜೋಡಿಸಬಾರದೆಂದು ಪಕ್ಷದ ಸೂಚನೆ ಇದೆ ಅದೇ ಪ್ರಕಾರ ನಮ್ಮಲ್ಲಿಯ 263 ಬೂತ್ ಗಳನ್ನು ಮೂರು ವರ್ಗಗಳಲ್ಲಿ ವಿಂಗಣೆ ಮಾಡಿದ್ದೇವೆ, ಯಾವ್ಯಾವ ಬೂತ್ ಗಳು ಯಾವ ವರ್ಗದಲ್ಲಿ ಬರುತ್ತವೆ ಎಂದು ತಿಳಿಸಿದರು, ಹಾಗೆ ಈ ಉದ್ಘಾಟನಾ ಅವಧಿ ಮುಗಿದ ನಂತರ ತಾವು ತಮಗೆ ತಿಳಿಸಲಾಗಿರುವ ವರ್ಗಗಳಲ್ಲಿ ಹೋಗಿ ಕೂಡಬೇಕು, ಒಟ್ಟು ಏಳು ಅವಧಿಗಳಿವೆ ಈ ಅವಧಿಗಳನ್ನು ಪಕ್ಷದ ಹಿರಿಯರು, ಅನುಭವಿಗಳು, ಪ್ರಶಿಕ್ಷಣ ಪಡೆದವರು, ಅವಧಿ ತೆಗೆದು ಕೊಳ್ಳುತ್ತಾರೆ. ಪ್ರತಿಯೊಬ್ಬರು ರಾತ್ರಿ ವಾತ್ಸವ್ಯ ಮಾಡಬೇಕು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಪ್ರಶಿಕ್ಷಣ ಪ್ರಕೊಷ್ಠದ ರಾಜ್ಯ ಸಂಚಾಲಕರಾದ ರಾಜಶೇಖರ ನಾಗಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ ಪಾಟೀಲ್, ಮಾಜಿ ಜಿಲ್ಲಾಧ್ಯಕ್ಷರಾದ ಶಿವರಾಜ ಗಂದಗೆ, ಜಗನ್ನಾಥ ಪಾಟೀಲ್, ಸುಭಾಷ್, ಬಿರಾದಾರ್, ಗೋವಿಂದರಾವ್ ಬಿರಾದಾರ್, ಪಂಡಿತ್ ಶಿರೋಳೆ, ಜೈ ಭೀಮ್ ಬಂಧು, ವೆಂಕಟ್ ಲಾಳೆ, ಅಶೋಕ್ ಪಾಟೀಲ್, ಚನ್ನಬಸವ ಬಳತೆ, ತಾನಾಜಿ ರಾಥೋಡ್, ಬಾಬುರಾವ್ ಧೂಪೆ, ಸಾಹನಾ ಪಾಟೀಲ್, ಪ್ರಸನ್ನ ಖಂಡ್ರೆ, ಶಿವಕುಮಾರ್ ಲೋಖಂಡೆ, ವೆಂಕಟ್ ಬಿರಾದಾರ್, ಕಿಶನರಾವ್ ಪಾಟೀಲ್, ಶ್ರೀಮತಿ ಸುಮನ್ ಜಲ್ದೆ, ಸೂರಜಸಿಂಗ್ ರಾಜಪೂತ್, ಭರತ ಖಂಡ್ರೆ, ಶರಣಪ್ಪ ಛತ್ರೆ, ಶಿವರಾಜ ಮಲ್ಲೇಶಿ, ರಾಚಪ್ಪ ಗೋರ್ಟೆ, ರೇಷ್ಮಾ ತಮಾಸಂಗೆ ಸೇರಿದಂತೆ, ಇನ್ನು ಅನೇಕ ಮುಖಂಡರು, ಪದಾಧಿಕಾರಿಗಳು, ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರೇವಣಸಿದ್ದ ಜಾಡರ್ ನಿರೂಪಿಸಿದರು, ಡಾ: ಮಹೇಶ್ ಭಾಲ್ಕೆ ವಂದಿಸಿದರು.

ವರದಿ : ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!