ಬೆಂಗಳೂರು: -ನಮ್ಮ ಭಾರತ ದೇಶದ ಪ್ರಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ರವರ ಜನ್ಮದಿನ ಮತ್ತು ಮಕ್ಕಳ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಇಡೀ ಭಾರತ ದೇಶದಲ್ಲೇ ಆಚರಿಸಲಾಗುತ್ತಿದೆ ಆದ್ದರಿಂದ ಸ್ವಾಮಿ ವಿವೇಕಾನಂದರ ಶಾಲಾ ಮಕ್ಕಳಿಗೆ ಶುಭಾಶಯಗಳು ಎಂದು ಸ್ವಾಮಿ ವಿವೇಕಾನಂದರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಂ ಬಳ್ಳಾರಿ ಹೇಳಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ಮುಖ್ಯರಸ್ತೆ ಹಾಲಿನ ಡೈರಿ ಬಳಿಯಿರುವ ಸ್ವಾಮಿ ವಿವೇಕಾನಂದ ಶಾಲಾ ಆವರಣದಲ್ಲಿ ಡಾ. ಬಿ ಎಂ ಬಳ್ಳಾರಿ ಅವರ ನೇತೃತ್ವದಲ್ಲಿ’ ಜವಾಹರ್ ಲಾಲ್ ನೆಹರು ರವರ ಹುಟ್ಟುಹಬ್ಬ ಮತ್ತು ಮಕ್ಕಳ ದಿನಾಚರಣೆ ಜ್ಯೋತಿ ಬೆಳಗಿಸಿ ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಕ್ಕಳಿಗೆ ಪೇನ್ನು ಸಿಹಿ ನೀಡಿ ಪ್ರಮಾಣ ಪತ್ರ ವಿತರಿಸಿ ಮಕ್ಕಳನ್ನು ಉದ್ದೇಶಿಸಿ ಡಾ. ಬಿ.ಎಂ.ಬಳ್ಳಾರಿ ಮಾತನಾಡಿದರು.
ಆರ್ ಟಿ ಐ ಸಲಹೆಗಾರ ನಾಗೇಶ್ ಕುಮಾರ್ ನಮಗೆಲ್ಲಾ ನಮ್ಮ ದೇಶದ ಪ್ರಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ನಡೆದು ಬಂದ ದಾರಿ ಮತ್ತು ಅವರ ಆದರ್ಶಗಳು ನಮಗೆ ಶ್ರೀರಕ್ಷೆಯಾಗಿದೆ ಹಾಗೆಯೇ ನಮ್ಮ ನಾಡಿನ ದೇಶದ ಮಕ್ಕಳು ಮುಂದೆ ಒಳ್ಳೆಯ ವಿದ್ಯಾಭ್ಯಾಸ ಪಡೆದು ಹೆತ್ತ ತಂದೆ ತಾಯಿಗಳಿಗೆ ಸ್ವಾಮಿ ವಿವೇಕಾನಂದರ ಶಾಲೆಗೆ ಕೀರ್ತಿ ತಂದು ಕೊಡಬೇಕು ಎಂದರು.
ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಹಿರೇಮಠ,
ಮುಖ್ಯೋಪಾಧ್ಯಾಯಿನಿ ಶಾಜಿಯಾ ಬಾನು, ಪೂರ್ಣಿಮಾ, ರಾಜೇಶ್, ಕಂಪ್ಯೂಟರ್ ಶಿಕ್ಷಕ ರಘು ಆನಂದ್, ಪುಟಾಣಿ ಮಕ್ಕಳಾದ ಟಿಕ್ಷೀತ್, ಮಾನ್ವಿತ. ಸಾನ್ವಿತ. ಮಹಿರ. ಮುಜಾಹಿದ್ ಮತ್ತು ಪೋಷಕರು ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು.
ವರದಿ:- ಅಯ್ಯಣ್ಣ ಮಾಸ್ಟರ್