ಬಾದಾಮಿ :-ಪುರಸಭೆಗೆ ಇಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಿತು. ತೀವ್ರ ಪೈಪೋಟಿ ನಡೆದಿದ್ದ ಬಾಗಲಕೋಟೆ ಜಿಲ್ಲೆ ಬಾದಾಮಿ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಿತು.
ಗುಳೇದಗುಡ್ಡ ಪುರಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ಗಲಾಟೆಗಳನ್ನು ಮನಗಂಡು ಬಾದಾಮಿ ಪುರಸಭೆ ಚುನಾವಣೆ ನಿಮಿತ್ಯ ಪೊಲೀಸ್ ಬಿಗಿ ಭಧ್ರತೆ ಒದಗಿಸಲಾಗಿತ್ತು. ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.ಬಾದಾಮಿ ಪುರಸಭೆ ಅಧ್ಯಕ್ಷರಾಗಿ ಪಾಂಡು ಕಟ್ಟಿಮನಿ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀಬಾಯಿ ಕಮ್ಮಾರ ಆಯ್ಕೆಯಾದರು. ಬಾದಾಮಿ ಪುರಸಭೆ ಸ್ಥಾನ ಕಾಂಗ್ರೆಸ್ ತೆಕ್ಕೆಗೆ ಬಂದಿತು.ಆಯ್ಕೆಯಾದ ನಂತರ ಮಾಧ್ಯಮದ ಜೊತೆ ಬಾದಾಮಿ ಶಾಸಕ ಭೀಮಸೇನ್ ಚಿಮ್ಮನಕಟ್ಟಿ ಹಾಗೂ ನೂತನ ಪುರಸಭೆ ಅಧ್ಯಕ್ಷ ಪಾಂಡು ಕಟ್ಟಿಮನಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.
ಪುರಸಭೆ ಆವರಣದಲ್ಲಿ ಹೊರಗೆ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗುಲಾಲು ಹಾಕಿ ಪಟಾಕಿ ಸಿಡಿಸಿ ತಮ್ಮ ನಾಯಕರನ್ನು ಹೆಗಲ ಮೇಲೆ ಹೊತ್ತು ಪುರಸಭೆಯಿಂದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಜಯಘೋಷ ಕೂಗಿದರು.ಇದೇ ಸಂದರ್ಭದಲ್ಲಿ ಕೆ. ಪಿ. ಸಿ. ಸಿ. ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಮಹೇಶ್. ಎಸ್. ಹೊಸಗೌಡ್ರ, ಪುರಸಭೆ ಮಾಜಿ ಅಧ್ಯಕ್ಷರಾದ ಮಂಜುನಾಥ ಹೊಸಮನಿ, ರಾಜಮಹಮ್ಮದ ಬಾಗವನ, ಎಂ.ಡಿ.ರಾಜೂರ,ಪುರಸಭೆ ಸದಸ್ಯ ಕನಕಗಿರಿ,ಸೇರಿದಂತೆ ಇನ್ನೂ ಅನೇಕ ಪುರಸಭೆ ಸದಸ್ಯರು ಹಾಗೂ ಮಾಜಿ ಸದಸ್ಯರುಗಳು ಉಪಸ್ಥಿತರಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ