ಕಲಘಟಗಿ: ಪಟ್ಟಣದ ಸ್ಟೇಟ ಬ್ಯಾಂಕ್ ಆಪ್ ಇಂಡಿಯಾ ಬ್ಯಾಂಕಿನ ಹತ್ತಿರ ಇರುವ ಸಿ.ಎಸ್.ಪಿ.ಸೇವಾ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬ್ಯಾಂಕಿನಿಂದ ನಿಯೋಜಿಸಲ್ಪಟ್ಟ ವ್ಯಕ್ತಿ ತಾಲೂಕಿನ ಬ್ಯಾಂಕ ಖಾತೆದಾರರಿಂದ ವಂಚಿಸಿ ಹಣ ಪಡೆದ ಘಟನೆ ಜರುಗಿದೆ.
ನಿತ್ಯದಲ್ಲಿ ಬ್ಯಾಂಕಿನಲ್ಲಿ ಜಮಾ ಮತ್ತು ಹಣ ಪಡೆಯಲು ಹೆಚ್ಚಿನ ಸೇವೆ ನೀಡಲು ಬ್ಯಾಂಕಗಳು ಇತ್ತಿಚಿಗೆ ಸಿ.ಎಸ್.ಪಿ.ಸೇವಾ ಕೇಂದ್ರ ಸ್ಥಾಪಿಸಲ್ಪಟ್ಟಿದ್ದು ಆದರೆ ಅದರಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ಗ್ರಾಹಕರ ಹೆಬ್ಬಟ್ಟಿನ ಗುರುತು ಪಡೆದು ಓದು ಬರಹ ಬಾರದ ಗ್ರಾಹಕರ ಖಾತೆಯಿಂದ ಹಣ ಲಪಟಾಯಿಸಿದ್ದಾನೆ ನಂತರ ಗ್ರಾಹಕರಿಗೆ ತಿಳಿದು ಬ್ಯಾಂಕ ವ್ಯವಸ್ಥಾಪಕರೊಂದಿಗೆ ಚರ್ಚೆಗೆ ಇಳಿದಾಗ ಘಟನೆ ಬೆಳಕಿಗೆ ಬಂದಿದ್ದು ಸೇವಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿ ಅಂದಾಜು ೧೫ ಲಕ್ಷದವರೆಗೆ ಮೋಸಮಾಡಿದ್ದಾನೆಂದು ಅಂದಾಜಿಸಲಾಗಿದೆ ವ್ಯವಸ್ಥಾಪಕರು ಮೂರು ತಿಂಗಳೊಳಗಾಗಿ ಸರಿ ಪಡಿಸುವ ಭರವಸೆ ನೀಡಿದ್ದಾರೆ ಕೆಲಕಾಲ ಬ್ಯಾಂಕನಲ್ಲಿ ಗೊಂದಲ ವಾತವರಣ ನಿರ್ಮಾಣವಾಗಿತ್ತು ಗ್ರಾಹಕರು ತಮ್ಮ ಹಣ ಮರಳಿ ತಮ್ಮ ಖಾತೆಗೆ ಜಮೆ ಮಾಡುವಂತೆ ಗ್ರಾಹಕರು ಆಘ್ರಹಿಸಿ ಮನವಿ ನೀಡಿದ್ದಾರೆ.
ಈ ಸಂಧರ್ಬದಲ್ಲಿ ಬಸವರಾಜ ಹಟಗಾರ,ಚನ್ನಬಸವ್ವ ದೊಡಮನಿ,ಕೆ.ಎ ಮುತ್ತಗಿ,ಆರ್,ವಿ ಪತಂಗಿ,ರಾಜು ಲಮಾಣಿ , ಎಂ.ಬಿ ಅಂಗಡಿ,ಫಕ್ಕಿರೇಶ ವಾಲಿಕಾರ,ಇದ್ದರು.
ವರದಿ : ಶಶಿಕುಮಾರ ಕಲಘಟಗಿ