Ad imageAd image

ಖ್ಯಾತ ಪ್ರವಚನಕಾರರಾದ ಪರಮಪೂಜ್ಯ ಮಹಾಂತ ಸ್ವಾಮಿಗಳು,ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Bharath Vaibhav
ಖ್ಯಾತ ಪ್ರವಚನಕಾರರಾದ ಪರಮಪೂಜ್ಯ ಮಹಾಂತ ಸ್ವಾಮಿಗಳು,ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
WhatsApp Group Join Now
Telegram Group Join Now

ವಿಜಯಪುರ :- ವ್ಯಕ್ತಿತ್ವ ಎಂಬುದು ಅನೇಕ ಶಕ್ತಿಗಳ ಸಂಗಮ ಆದರ್ಶ, ಸದಾಚಾರ, ಶ್ರದ್ಧೆ, ನಿಷ್ಠೆ, ದಕ್ಷತೆ, ಎಚ್ಚರ ಸಂದೇಶಗಳೊಡನೆ ಹೊಂದಿಕೊಳ್ಳುವ ಸಾಮರ್ಥ್ಯ, ವೃತ್ತಿ ಪ್ರಿಯತೆ, ಪರೋಪಕಾರ ಬುದ್ಧಿ ಪ್ರಾಮಾಣಿಕತೆಗಳು ವ್ಯಕ್ತಿತ್ವ ನಿರ್ಮಿಸುವ ಶಕ್ತಿಗಳು ಎಂದು ಖ್ಯಾತ ಪ್ರವಚನಕಾರರಾದ ಪರಮಪೂಜ್ಯ ಮಹಾಂತ ಸ್ವಾಮಿಗಳು ಹೇಳಿದರು.

ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ನಿಜವಾದ ಸಂಪತ್ತು ಎಂದರೆ ಜ್ಞಾನ ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧಿಕ್ಷಕರರಾದ ಎಸ್ ಎ ಬಿರಾದಾರ್ ( ಕನ್ನಾಳ ಗೌಡರು) ಅವರನ್ನು ಕಾಲೇಜಿನ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಶೈಕ್ಷಣಿಕ ಮತ್ತು ವೃತ್ತಿಪರ ಯಶಸ್ವಿಗೆ ಸಮಾಜಕ ಮತ್ತು ಭಾವನಾತ್ಮಕ ಬುದ್ಧಿವಂತಿಕೆ ಅಗತ್ಯ. ಉತ್ತಮ ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳು ಅಪಾಯಕಾರಿ ನಡುವಳಿಕೆಯ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತ ಅಧಿಕಾರಿಗಳಾದ ಪ್ರೊ ಆಯ್ ಎಸ್ ಕಾಳಪ್ಪನವರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ಡಾ. ಜಿ ಡಿ ಅಕಮಂಚಿ ಮತ್ತು ಶ್ರೀಮತಿ ವಿದ್ಯಾ ಎಸ್ ಬಿರಾದಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಜಿ ಎಮ್ ಬಿರಾದಾರ ನಿರೋಪಿಸಿದರು ಸಂತೋಷ್ ತೆಲಕರ್ ಸ್ವಾಗತಿಸಿದರು ಎಸ್ ಆರ್ ಬುಯಾರ್ ವಂದಿಸಿದರು.
ಬಿ ಎಂ ಮನಗೋಂಡ, ಬಿ ಟಿ ಅಂಗಡಿ, ಟಿ ಎಮ್ ಪವಾರ, ಅಮರೇಶ ಸಾಲಕ್ಕಿ, ಎಸ್ ಎಮ್ ನಾಯ್ಕೋಡಿ, ಜೆ ಎ ಬಿರಾದಾರ, ಸಿ ಟಿ.ಕಂದಗಲ್,ವಿ ವಿ ಪಾಟೀಲ್, ಎಂ ಟಿ ದೊಡ್ಡಮನಿ, ಆರ್ ಬಿ ತಾಂಬೆ, ಮಹಾದೇವ್ ಖೈರಾವ್, ವಿ ಎನ್ ಮಠ, ಆರ್ ಬಿ ಪಾಟೀಲ್, ಎಸ್ ಎಂ ಕುಂಬಾರ್ ಹಾಗೂ ಸಮಸ್ತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ವರದಿ. ಸಾಯಬಣ್ಣ ಮಾದರ

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!