ಬೆಂಗಳೂರು:ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಕರ್ನಾಟಕದ ಸೊಸೆಯಾಗಿದ್ದು, ಮಧ್ಯ ಪ್ರದೇಶದ ಸಚಿವರ ಆಕ್ಷೇಪಾರ್ಹ ಹೇಳಿಕೆ ಸೂಫಿಯಾರವರಿಗಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಆಕ್ಷೇಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಫಿಯಾ ಅವರ ಪತಿ ಬೆಳಗಾವಿ ಜಿಲ್ಲೆಯವರು. ನಿನ್ನೆ ಬೆಳಗಾವಿಯ ಎಸ್ಪಿಯವರು ಹೇಳಿಕೆ ನೀಡಿ ಮಧ್ಯ ಪ್ರದೇಶದ ಸಚಿವರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಮುಂದೆ ಇದನ್ನು ಕೇಂದ್ರಸರ್ಕಾರದ ಗಮನಕ್ಕೆ ತಂದು ಟೀಕೆ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆಸೂಚಿಸಲಾಗಿದೆ. ಇದು ರಾಜ್ಯ ಮತ್ತು ದೇಶಕ್ಕೆ ಮಾ ಮಾಡಿದ ಅಪಮಾನ. ಸೂಕ್ತ ಸೂಕ್ಷ್ಮ ಪರಿಸ್ಥಿತಿಯಂತಹ ವೇಳೆಯಲ್ಲಿ ಇಂತಹ ಕೀಳು ಮನಸ್ಥಿತಿ ಯಾರಿಗೂ ಬರಬಾರದು ಎಂದರು.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತಕ್ಷಣಕ್ಕೆ 5.50 ಕೋಟಿ ರೂ. ನೀಡಬೇಕು. ಆದರೆ ಪ್ರತೀಬಾರಿ ಅನುದಾನ ನೀಡಿಕೆಯಲ್ಲಿ ವಿಳಂಬವಾಗುತ್ತಲೇ ಇದೆ. ಇದಕ್ಕಾಗಿ ನಿನ್ನೆ ಮುಖ್ಯಮಂತ್ರಿಗಳು ಸಂಸದರ ಜೊತೆ ಸಭೆ ನಡೆಸಿ
ಗಮನಕ್ಕೆ ತಂದಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹಣ ಬಿಡುಗಡೆಗೆ ಒತ್ತಡ ಹೇರುವಂತೆ ಮನವಿ ಮಾಡಿದ್ದಾರೆ.
ಕೆಲವು ಸಂಸದರು ಸಭೆಗೆ ಗೈರುಹಾಜರಾದ ಬಗ್ಗೆ ಹೆಚ್ಚು ಚರ್ಚೆ ಮಾಡಲು ಬಯಸುವುದಿಲ್ಲ. ಅವರಿಗೆ ಅವರದೇ ಆದ ಕಾರ್ಯ ಒತ್ತಡಗಳಿರುತ್ತವೆ. ಆದರೆ ರಾಜ್ಯದ ಪರವಾಗಿ ಎಲ್ಲರೂ ಧ್ವನಿಯೆತ್ತಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಈ ಹಿಂದೆ ಅನುದಾನ ಸಿಗದೇ ಇದ್ದುದ್ದಕ್ಕಾಗಿ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಬೇಕಾಯಿತು.




