ಮಕ್ಕಳಿಗೆ ತಂದೆ ತಾಯಿ ಅಜ್ಜಿ ಅಜ್ಜ ಚಿಕ್ಕಪ್ಪ ಚಿಕ್ಕಮ್ಮ ಇವರಗಳ ಬಾಂಧವ್ಯದ ಬಗ್ಗೆ ತಿಳಿ ಹೇಳಿದರೆ ಮುಂದಿನ ದಿನಗಳಲ್ಲಿ ನಮ್ಮ ಜೀವಿತಾವಧಿಯಲ್ಲಿ ನಡೆಯುವ ಅನಾಹುತಗಳು ತಪ್ಪಲಿದೆ ಎಂದು ರಾಮನಗರದ ಆಶಾ ಅಭಿಪ್ರಾಯಪಟ್ಟರು.
ನಗರದ ಭಾರತೀಯ ಜೀವ ವಿಮಾನ ನಿಗಮದ ಶಾಖಾ ಕಚೇರಿಯಲ್ಲಿ ಆಯೋಜಿಸಿದ್ದ ಪ್ರತಿನಿಧಿಗಳ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಆಶಾ ಅವರು ನಮ್ಮ ಸಂಸ್ಕಾರ ಸಂಸ್ಕೃತಿ ಇಂದಿನ ಪೀಳಿಗೆಗೆ ತಿಳಿಯುವಂತೆ ಮಾಡಬೇಕು ಎಂದು ಹೇಳಿದರು ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಖಾ ಪ್ರಬಂಧಕ ಋಷಿ ಚರಣ್ ಮಾತನಾಡಿ ಒಬ್ಬ ಮಹಿಳೆ ತನ್ನದೇ ಆದ ಚಾಪುಮುಡಿಸಿ ಬಡತನ ರೇಖೆಯಿಂದ ಮೇಲೆ ಬಂದು ತಂದೆ ತಾಯಿ ಹಾಗೂ ತಮ್ಮ ಕುಟುಂಬವನ್ನು ತೊರೆದು ರಾಮನಗರ ಜಿಲ್ಲೆಯಲ್ಲಿ ಸುಮಾರು 6,000ಕ್ಕೂ ಹೆಚ್ಚು ಅನಾಥ ಶವಗಳನ್ನು ಸಂಸ್ಕಾರ ಹಿತವಾಗಿ ಅಂತ್ಯಕ್ರಿಯೆ ಮಾಡಿದ ಶ್ರೀಮತಿ ಆಶಾ ಅವರನ್ನು ನಮ್ಮ ಶಾಖಾ ಕಚೇರಿಯಲ್ಲಿ ಅಭಿನಂದಿಸಿ ಗೌರವಿಸಿದ್ದು ನಮ್ಮ ನಿಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು ಹಾಗೂ ಕಳೆದ ಸಾಲಿನಲ್ಲಿ ಭಾರತದಲ್ಲೇ ಅರಸೀಕೆರೆ ಜೀವವಿಮ ನಿಗಮ ಅದ್ವಿತೀಯ ಸಾಧನೆ ಮಾಡಿದ ಹೆಗ್ಗಳಿಕೆ ಪಾತ್ರರಾಗಿದ್ದು ಈಗ ಸದರಿ ವರ್ಷದಲ್ಲೂ ಕೂಡ ಗಣನೀಯ ಸಾಧನೆ ಮಾಡಬೇಕಾಗಿದೆ ಇದರಲ್ಲಿ ಪ್ರತಿನಿಧಿಗಳ ಪಾತ್ರ ಪ್ರಮುಖವಾದದ್ದು ಎಂದು ಹೇಳಿದರು ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ವಿಜಯ್, ಸುಮ್ನ ರವಿಕುಮಾರ್, ಲಿಂಗರಾಜು, ಮಾರಪ್ಪ ಕೌಶಿ, ರವಿಂದ್ರನಾಥ್, ಮತ್ತು ಸಿ,ಎಲ್,ಐ, ಲೋಕೇಶ್, ರಾಮಚಂದ್ರ,ಇತರರು ಮಾತನಾಡಿದರು ಈ ಸಂದರ್ಭದಲ್ಲಿ ಶಾಖಾ ಸಿಬ್ಬಂದಿ ಶ್ರೀ ಲಕ್ಷ್ಮೀ,ಉಮಾ, ಕಾವ್ಯಶ್ರೀ,ಸುಶೀಲ, ಮನೋಜ್,ವಿಜಯ್,ನರಸಿಂಹ, ಸಿದ್ದಯ್ಯ, ಇತರರು ಹಾಜರಿದ್ದರು.
ವರದಿ: ರಾಜು ಅರಸಿಕೆರೆ




