Ad imageAd image

ಸರ್ಕಾರಿ ಶಾಲೆಯ ಅಡ್ಮಿಷನ್ ಗಾಗಿ ರಾತ್ರಿಯಿಡೀ ಕ್ಯೂ ನಿಂತ ಪಾಲಕರು :ಖಾಸಗಿ ಶಾಲೆಗಳಿಗೆ ಸೆಡ್ಡು

Bharath Vaibhav
WhatsApp Group Join Now
Telegram Group Join Now

ಬಕವಿ-ಬನಹಟ್ಟಿ : ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಒಳ್ಳೆಯಶಿಕ್ಷಣ ನೀಡಬೇಕು ಖಾಸಗಿ ಶಾಲೆಗಳಿಗೆ ಸೇರಿಸಿದರೆ ಒಳ್ಳೆಯ ಶಿಕ್ಷಣ ಕೊಡುತ್ತಾರೆ ಎಂಬ ಭ್ರಮೆ ಈಗಿನ ಪೀಳಿಗೆಯ ಜನರಲ್ಲಿ ಹೆಚ್ಚು ನೋಡುತ್ತೇವೆ ಅದರಲ್ಲೂ ನಗರ ಪ್ರದೇಶಗಳ ಪೋಷಕರು ಮಗು ಹುಟ್ಟುವ ಮೊದಲೇ ಖಾಸಗಿ ಶಾಲೆಗಳಲ್ಲಿ ಲಕ್ಷ ಲಕ್ಷಗೆಟ್ಟಲೆ ಡೊನೇಶನ್ ಕೊಟ್ಟು ಮಕ್ಕಳನ್ನು ಸೇರಿಸಲು ತುದಿಗಾಲಿನಲ್ಲಿ ನಿಲ್ಲುತ್ತಾರೆ ಆದರೆ ಈ ಬಾಗಲಕೋಟೆ ಜಿಲ್ಲೆಯ ನಾವಲಗಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಎಂಬಂತಿದೆ ಅಲ್ಲದೆ ಇಲ್ಲಿಗೆ ಮಕ್ಕಳನ್ನು ಸೇರಿಸಲು ಪೋಷಕರು ರಾತ್ರಿಯಿಡಿ ಶಾಲೆಯ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ಮಕ್ಕಳ ದಾಖಲಾತಿಯನ್ನು ಮಾಡುತ್ತಾರೆ ಎಂದರೆ ನಂಬಲೇಬೇಕು.

ಹೌದು ನಾವಲಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪೂರ್ವ ಪ್ರಾಥಮಿಕ ವಿಭಾಗದ ಆಂಗ್ಲ ಮಾಧ್ಯಮ)ನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ರಾತ್ರಿಯೇ ಕ್ಯೂ ನಿಂತಿದ್ದಾರೆ ಇದಕ್ಕೆ ಕಾರಣ ಸರ್ಕಾರದ ನಿಯಮದ ಪ್ರಕಾರ ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ 30 ಸೀಟ್ ಗಳ ಭರ್ತಿಗೆ ಮಾತ್ರ ಅವಕಾಶ ನೀಡಿರುವುದು, ಇಲ್ಲಿನ ಆಂಗ್ಲ ಮಾಧ್ಯಮ ಶಾಲೆ ಬಹಳ ಹೆಸರುವಾಸಿಯಾಗಿದ್ದು ಅಲ್ಲದೆ ಇಲ್ಲಿನ ಶಿಕ್ಷಣ ಗುಣಮಟ್ಟ ಉತ್ತಮ್ಮವಾಗಿರುವುದರಿಂದ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಇದೆ ಶಾಲೆಗೆ ಸೇರಿಸಲು ಬಯಸುತಿದ್ದರೆ ಆದರೆ ಇಲ್ಲಿ ಕೇವಲ ಮೂವತ್ತು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಿರುವುದರಿಂದ ಮೊದಲು ಬಂದವರಿಗೆ ಆದ್ಯತೆ ನೀಡಲಾಗುದಗಿ ಶಾಲಾ ಆಡಳಿತ ಮಂಡಳಿ ನೀಡಿರುವ ಸೂಚನೆಯ ಮೇರೆಗೆ ಪೋಷಕರು ರಾತ್ರಿಯೇ ಶಾಲೆಯ ಬಳಿ ಸಾಲಿನಲ್ಲಿ ನಿಂತು ತಮ್ಮ ಮಕ್ಕಳ ದಾಖಲಾತಿಗೆ ಮುಂದಾಗಿದ್ದಾರೆ.

8

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!