Ad imageAd image

ಐಪಿಎಲ್ ಟಿಕೆಟ್‌ಗಾಗಿ ಸ್ಪೀಕರ್ ಕಛೇರಿ ಮುಂದೆ ಕ್ಯೂ ಹಚ್ಚಿದ ಶಾಸಕರ ಪಿಎಗಳು

Bharath Vaibhav
ಐಪಿಎಲ್ ಟಿಕೆಟ್‌ಗಾಗಿ ಸ್ಪೀಕರ್ ಕಛೇರಿ ಮುಂದೆ ಕ್ಯೂ ಹಚ್ಚಿದ ಶಾಸಕರ ಪಿಎಗಳು
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಜನಸಾಮಾನ್ಯರು ದಿನನಿತ್ಯದ ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದರೆ, ಮತ್ತೊಂದೆಡೆ ನಮ್ಮ ಜನಪ್ರತಿನಿಧಿಗಳು ಐಪಿಎಲ್ ಕ್ರೇಜ್‌ನಲ್ಲಿ ಮುಳುಗಿದ್ದಾರೆ.

ನಾಳೆ (ಭಾನುವಾರ) ನಡೆಯಲಿರುವ ಆರ್‌ಸಿಬಿ ಮತ್ತು ಸಿಎಸ್‌ಕೆ (RCB vs CSK) ನಡುವಿನ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಪಡೆಯಲು ಶಾಸಕರ ಆಪ್ತ ಸಹಾಯಕರು (PA) ಸ್ಪೀಕರ್ ಕಚೇರಿ ಮುಂದೆ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂದಿದೆ.

ಶಾಸಕರಿಗೆ ಉಚಿತ ಟಿಕೆಟ್: ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ನಡುವಿನ ಒಪ್ಪಂದದಂತೆ ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ತಲಾ 3 ಉಚಿತ ಟಿಕೆಟ್‌ಗಳನ್ನು ನೀಡಲಾಗುತ್ತದೆ.

ಈ ಟಿಕೆಟ್‌ಗಳನ್ನು ಪಡೆಯಲು ಶಾಸಕರು ತಮ್ಮ ಪಿಎಗಳನ್ನು ಸ್ಪೀಕರ್ ಕಚೇರಿಗೆ ಕಳುಹಿಸಿದ್ದಾರೆ. ಭಾನುವಾರದ ಪಂದ್ಯಕ್ಕೆ ಭಾರಿ ಬೇಡಿಕೆ ಇರುವುದರಿಂದ, ಟಿಕೆಟ್ ಕೈತಪ್ಪಬಾರದೆಂಬ ಕಾರಣಕ್ಕೆ ಪಿಎಗಳು ಕಚೇರಿ ಮುಂದೆ ಕ್ಯೂ ನಿಂತು ಟಿಕೆಟ್ ಪಡೆದುಕೊಂಡಿದ್ದಾರೆ.

ಜನರ ಸಂಕಷ್ಟದ ನಡುವೆ ಮೋಜು: ಪ್ರಸ್ತುತ ಬೆಂಗಳೂರಿನಲ್ಲಿ ಆಟೋ ಚಾಲಕರು ಗ್ಯಾಸ್‌ಗಾಗಿ (LPG/CNG) ರಾತ್ರಿಯಿಡೀ ಕ್ಯೂ ನಿಂತು ಗೋಳಾಡುತ್ತಿದ್ದಾರೆ.

ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತವಾಗಿದೆ. ಇಂತಹ ಗಂಭೀರ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕಾದ ಜನಪ್ರತಿನಿಧಿಗಳು, ಮನರಂಜನೆಗಾಗಿ ತಮ್ಮ ಸಿಬ್ಬಂದಿಯನ್ನು ಕ್ಯೂ ನಿಲ್ಲಿಸಿ ಟಿಕೆಟ್ ಪಡೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದವರು ಐಪಿಎಲ್ ಟಿಕೆಟ್‌ಗಾಗಿ ಈ ರೀತಿ ಮುಗಿಬೀಳುತ್ತಿರುವುದು ವಿಪರ್ಯಾಸವೇ ಸರಿ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!