Ad imageAd image

ಪಸ್ತಾಪುರ ಜಿಪಿ ಅಧ್ಯಕ್ಷ : ವಿಕಾಸ್ ಜಾಧವ ಆಯ್ಕೆ

Bharath Vaibhav
ಪಸ್ತಾಪುರ ಜಿಪಿ ಅಧ್ಯಕ್ಷ : ವಿಕಾಸ್ ಜಾಧವ ಆಯ್ಕೆ
WhatsApp Group Join Now
Telegram Group Join Now

ಕಾಳಗಿ :ತಾಲೂಕಿನ ಪಸ್ತಾಪುರ ಗ್ರಾಮ ಪಂಚಾಯತ ಅಧ್ಯಕ್ಷ ಆಯ್ಕೆ ಮಾಡಲಾಯಿತು, ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಲ್ಲಿದ್ದ ಅಭ್ಯರ್ಥಿಗಳು ವಿಕಾಸ್ ತಂದೆ ಜಗನಾಥ್ ಜಾಧವ, ಮತ್ತು ವಿಮಲಾಬಾಯಿ ಗಂಡ ಹಣಮಂತರಾವ್ ಪೊಲೀಸ್ ಪಾಟೀಲ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಮಾಡಲಾಯಿತು, ಇದೆ ವೇಳೆಯಲ್ಲಿ ಒಟ್ಟು ಎಂಟು ಗ್ರಾಮ ಪಂಚಾಯತ್ ಸದಸ್ಯರಿದ್ದು, ಎರಡು ಕಡೆ ಸಮಾನ ಮತ ಚಲಾವಣೆ ಆಗಿದರಿಂದ ಚೀಟಿ ಎತ್ತುವ ಮೂಲಕ ಅಭ್ಯರ್ಥಿಯ ಹೆಸರು ಘೋಸಿಸಲಾಯಿತು, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಯಾದ ಅಭ್ಯರ್ಥಿ ವಿಕಾಸ ತಂದೆ ಜಗನಾಥ ಜಾಧವ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಆಗಿದರು, ಉಪಾಧ್ಯಕ್ಷರಾಗಿ ಕಸ್ತೂರಿಬಾಯಿ ಗಂಡ ಮರೆಪ್ಪ ಅವರೇ ಮುಂದುವರೆಸಿದರು.

ಈ ಸಂದರ್ಭದಲ್ಲಿ ಘಮವತಿ ತಹಸೀಲ್ದಾರ ಕಾಳಗಿ , ಪಿಎಸ್ಐ ರಟಕಲ್ , ಹಾಗೂ ಬಾಬುರಾವ ಸಣಕಲ್ ಅಭಿವೃದ್ಧಿ ಅಧಿಕಾರಿ ಪಸ್ತಾಪುರ, ಹಿರಿಯ ಮುಖಂಡರಾದ, ಮಾಣಿಕರಾವ್ ಪೊಲೀಸ್ ಪಾಟೀಲ್ ಬಿಜೆಪಿ ಮುಖಂಡರು, ಮುಕುಂದರಾವ ಪಸ್ತಾಪುರು, ಜಗನಾಥ ಜಾಧವ ಬಿಜೆಪಿ ಮುಖಂಡರು, ರಮೇಶ್ ದುತ್ತರಗಿ, ಸುಭಾಷ್ ಪೂಜಾರಿ, ಸಿದ್ದಪ್ಪ ಕಮಲಪುರ, ಸಂತೋಷ ತಡಪಳ್ಳಿ, ಅನೀಲ್ ಗಂಜಗಿರಿ, ತುಕಾರಾಮ್ ಗಂಜಗಿರಿ, ನಂದಿ ಶರಣು ಪಸ್ತಾಪುರ, ವೀರಪ್ಪ ಹರಕಂಚಿ, ಗೋಪಾಲ್ ಠವರು ರಾಠೋಡ್, ಈಶ್ವರ್ ಹುನುಸಿಂಗ್ ಜಾಧವ,ಅಕ್ಷಯ್ ಜಾಧವ, ಅಶೋಕ್ ರಾಠೋಡ್, ಜಗನಾಥ್ ಹರಿಚಂದ್ರ ನಾಯಕ್,ಸಿದ್ರಾಮ ಟಿ ಟಿ, ಬಸವರಾಜ್ ಬಡಿಗೇರ್, ಪ್ರಶಾಂತ್ ರಾಠೋಡ್ ಗುಲ್ಬರ್ಗ, ಇದ್ದರು.

ವರದಿ : ಹಣಮಂತ ಕುಡಹಳ್ಳಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!