Ad imageAd image

ಪತಂಜಲಿ ಪ್ರಾಣಾಯಾಮ ,ಯೋಗ ವಿಜ್ಞಾನ ಶಿಬಿರ ಕಾರ್ಯಕ್ರಮ

Bharath Vaibhav
ಪತಂಜಲಿ ಪ್ರಾಣಾಯಾಮ ,ಯೋಗ ವಿಜ್ಞಾನ ಶಿಬಿರ ಕಾರ್ಯಕ್ರಮ
WhatsApp Group Join Now
Telegram Group Join Now

ರಾಮದುರ್ಗ :-ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸೋಮವಾರ  ದಿನಾಂಕ:17/06/2024 ರಿಂದ 21/06/2024 ರ ವರೆಗೆ ಬೆಳಗ್ಗೆ 5.30 ರಿಂದ 7 ಗಂಟೆವರೆಗೆ ಪತಂಜಲಿ ಪ್ರಾಣಾಯಾಮ ಹಾಗೂ ಯೋಗ ವಿಜ್ಞಾನ ಶಿಬಿರ ಕಾರ್ಯಕ್ರಮ ಜರಗುವುದು

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಮಹಾಂತೇಶ್ ನಗರದಲ್ಲಿ ಇದ್ದಂತ ಬಸವೇಶ್ವರ ಶಾಲಾ ಆವರಣದಲ್ಲಿ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಮಹಿಳಾ ಪತಂಜಲಿ, ಯುವ ಭಾರತ, ಕಿಸಾನ್ ಸೇವಾ ಸಮಿತಿ, ಮಹರ್ಷಿ ಪತಂಜಲಿ ಯೋಗ ಪ್ರತಿಷ್ಠಾನ, ಭಾರತೀಯ ವೈದ್ಯಕೀಯ ಸಂಸ್ಥೆ, ಆಯುಶ ಫೌಂಡೇಶನ್ ಆಫ್ ಇಂಡಿಯಾ, ರೋಟರಿ ಕ್ಲಬ್, ಇನ್ನರವೀಲ ಕ್ಲಬ್, ಲಯನ್ಸ್ ಕ್ಲಬ್, ಜೆಸಿಐ ಸಂಸ್ಥೆ, ರಾಮದುರ್ಗ ವ್ಯಾಪಾರಸ್ಥರ ಸಂಘ, ರಾಮದುರ್ಗ ಪತ್ರಕರ್ತರ ಸಂಘ, ವಿವೇಕ ಬಳಗ,
ಛಾಯಾ ಗ್ರಾಹಕರ ಸಂಘ ರಾಮದುರ್ಗ ಇವರ ಸಂಯೋಗದಲ್ಲಿ ಪತಂಜಲಿ ಪ್ರಾಣಾಯಾಮ ಹಾಗೂ ಯೋಗ ವಿಜ್ಞಾನ ಶಿಬಿರ ಕಾರ್ಯಕ್ರಮವನ್ನು ಬಿಜೆಪಿ ಮುಖಂಡರು ಹಾಗೂ ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಮಲ್ಲಣ್ಣ ಯಾದವಾಡ, ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಈ ಒಂದು ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಆರ್ ಎಸ್ ಕೋಟೂರ, ಪುಟ್ಟರಾಜ್ ಗವಾಯಿ ಪಾಠಶಾಲೆಯ ಸಂಗೀತ ಶಿಕ್ಷಕರು ಹೂಗಾರ್, ಪ್ರವೀಣ ಪತ್ತೇಪೂರ ಪ್ರಧಾನ ಕಾರ್ಯದರ್ಶಿ ಮಹರ್ಷಿ ಪತಂಜಲಿ ಯೋಗ ಪ್ರತಿಷ್ಠಾನ, ಡಾ// ಬಿ ಎಲ್ ಸಂಕನಗೌಡ್ರ ಅಧ್ಯಕ್ಷರು ಮಹರ್ಷಿ ಪತಂಜಲಿ ಯೋಗ ಪ್ರತಿಷ್ಠಾನ, ರಾಜೇಶ್ ಬೀಳಗಿ ಅಧ್ಯಕ್ಷರು ಸ್ವಾಭಿಮಾನ ಟ್ರಸ್ಟ್, ಈರಣ್ಣ ಬೆನಕಟ್ಟಿ ಕಿಸಾನ್ ಸೇವ ಸಮಿತಿ, ಮಂಜುನಾಥ ಬಿ ಎಚ್ ಯುವ ಪ್ರಭಾರಿ ಪತಂಜಲಿ ಯೋಗ ಸಮಿತಿ , ಗೀತಾ ಗುರುಮಠ ಮಹಿಳಾ ಪ್ರಭಾರಿ ಪತಂಜಲಿ ಯೋಗ ಸಮಿತಿ, ಶ್ರೀಧರ್ ದೊಡಮನಿ ಪ್ರಭಾರಿ ಪತಂಜಲಿ ಯೋಗ ಸಮಿತಿ ರಾಮದುರ್ಗ ಛಾಯಾ ಗ್ರಾಹಕರ ಸಂಘದ ಅಧ್ಯಕ್ಷರಾದ ಗುರು ಮುಗಳಿ, ವಿಠ್ಠಲ ಕಂಬಾರ್, ರವಿ ತಿಪ್ಪಣ್ಣವರ, ಮಾಂತೇಶ್ ಬೈಲವಾಡ, ಇನ್ನೂ ಅನೇಕ ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.ನಿರಪಕರು ನಾರಾಯಣ್ ಹಳ್ಳಿಕೇರಿ,ಸ್ವಾಗತ ಕೋರಿದವರು ಶಿವಾನಂದ ಕಲ್ಲೂರು, ವಂದನಾರ್ಪಣೆ ರವಿ ತಿಪ್ಪಣ್ಣವರ

ವರದಿ:-ಮಂಜುನಾಥ ಕಲಾದಗಿ

WhatsApp Group Join Now
Telegram Group Join Now
Share This Article
error: Content is protected !!