ಪತಂಜಲಿ ಯೋಗ ಶಿಕ್ಷಣ ಸಮಿತಿ ಬನ್ನಿಕಟ್ಟಿ ಕೊಪ್ಪಳ ಐದನೇ ವರ್ಷದ ವಾರ್ಷಿಕೋತ್ಸವ

Bharath Vaibhav
ಪತಂಜಲಿ ಯೋಗ ಶಿಕ್ಷಣ ಸಮಿತಿ ಬನ್ನಿಕಟ್ಟಿ ಕೊಪ್ಪಳ ಐದನೇ ವರ್ಷದ ವಾರ್ಷಿಕೋತ್ಸವ
WhatsApp Group Join Now
Telegram Group Join Now

ಕೊಪ್ಪಳ: ನಗರದ ಪತಂಜಲಿ ಯೋಗ ಸಮಿತಿ ಬನ್ನಿಕಟ್ಟಿ ನಗರದ ಸತತವಾಗಿ 5 ವರ್ಷಗಳಿಂದ ಯೋಗ ತರಬೇತಿಯನ್ನು ನೀಡುತ್ತಿದ್ದು ನಾಳೆ ದಿನಾಂಕ 28.07.2024 ರಂದು ಪತಂಜಲಿ ಯೋಗ ಸಮಿತಿಯ ಐದನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯಲಬುರ್ಗಾ ಪಟ್ಟಣದ ಶ್ರೀ ಮುರಡಿ ಮಠದ ಶ್ರೀಗಳು, ಮುಖ್ಯ ಅತಿಥಿಗಳಾಗಿ ಯೋಗಿಣಿ ಅಕ್ಕನವರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯ ಕೊಪ್ಪಳ, ಶರಣಪ್ಪ ಕಾರಟಗಿ ಜಿಲ್ಲಾ ಪತಂಜಲಿ ಯೋಗ ಪ್ರಭಾವಿಗಳು, ಡಾ. ಎಸ್ .ಬಿ. ಹಂದ್ರಾಳ ಪತಂಜಲಿ ಯೋಗ ರಾಜ್ಯ ಸಮಿತಿಯ ಸದಸ್ಯರು, ಶರಣೆಗೌಡ ಯುವ ಪ್ರಭಾವಿಗಳು ಸೋಶಿಯಲ್ ಮೀಡಿಯಾ, ಭೀಮಸೇನ ಮೇಘರಾಜ ಸಹ ಪ್ರಭಾರಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಕೊಪ್ಪಳ ಇವರುಗಳು ಭಾಗವಹಿಸಲಿದ್ದು ಕಾರ್ಯಕ್ರಮಕ್ಕೆ ಪಟ್ಟಣದ ಎಲ್ಲಾ ಯೋಗ ಶಿಕ್ಷಣ ಸಮಿತಿಯವರು ಮತ್ತು ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಮಾತನಾಡಿದರು.

ಹಿರಿಯ ಯೋಗ ಸಾಧಕರಾದ ಕೃಷ್ಣಪ್ಪದಾಸ ಕನಕಪ್ಪನವರ ಮಾತನಾಡಿ ಈ ಮೊದಲು ನಾನು 25 ವರ್ಷಗಳಿಂದ ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯದಲ್ಲಿ ಯೋಗ ಅಭ್ಯಾಸ ಮಾಡಿದ್ದು ಈಗ
ಸತತವಾಗಿ ಐದು ವರ್ಷಗಳಿಂದ ಕೊಪ್ಪಳ ಪಟ್ಟಣದ ಬನ್ನಿಕಟ್ಟೆಯಲ್ಲಿ ಇರುವ ಪತಂಜಲಿ ಯೋಗ ತರಬೇತಿ ಶಿಬಿರದಲ್ಲಿ ಯೋಗಭ್ಯಾಸವನ್ನು ನಡೆಸಿಕೊಂಡು ಬರುತ್ತಿದ್ದು ಸಾರ್ವಜನಿಕರು ಯೋಗ ಮಾಡುವುದರ ಮುಖಾಂತರ ಎಲ್ಲಾ ಹಿರಿಯ ಅನುಭವಿಗಳ ಮಾರ್ಗದರ್ಶನದಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮಾತನಾಡಿದರು.

ನಂತರ ಯೋಗ ಶಿಬಿರಾರ್ಥಿ, ಯೋಗ ಸಾಧಕರು ಮತ್ತು ನಿವೃತ್ತ ಲೆಕ್ಕ ಪರಿಶೋಧಕರಾದ ಮಂಜುನಾಥ್ ಹೊಸಳ್ಳಿ ಮಾತನಾಡಿ ಯೋಗ ಅಭ್ಯಾಸಗಳನ್ನು ನಿರಂತರವಾಗಿ ಮಾಡುವುದರಿಂದ ವಿವಿಧ ರೋಗಗಳನ್ನು ದೂರ ಇಡಬಹುದು ಆದ್ದರಿಂದ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ವರದಿ : ಶಿವಯ್ಯ ಕೆಂಭಾವಿಮಠ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!