Ad imageAd image

ಪವಿತ್ರಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ

Bharath Vaibhav
ಪವಿತ್ರಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ
WhatsApp Group Join Now
Telegram Group Join Now

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ರಿಲೀಸ್‌ ಆಗಿದ್ದಾರೆ. ಇದೀಗ ಅವರು ಮೊದಲಿನಂತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಲಿದ್ದಾರೆ. ಇದೀಗ ಮತ್ತೊಂದು ಯಶಸ್ಸಿನ ಟಿಪ್ಸ್‌ ಬಗ್ಗೆ ತಮ್ಮ ಇನ್ಸ್ಟಾದಲ್ಲಿ ಬರೆದುಕೊಂಡಿದ್ದು, ಇದು ಭಾರೀ ವೈರಲ್‌ ಆಗುತ್ತಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನುಳಿದವರು ಕೂಡ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಅತ್ತ ನಟ ದರ್ಶನ್‌ ಮತ್ತೆ ಡೆವಿಲ್‌ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದರೆ, ಇತ್ತ ಸ್ನೇಹಿತೆ ಪವಿತ್ರಾ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ತಮ್ಮ ಇನ್ಸ್ಟಾ ಖಾತೆಯಲ್ಲಿ ಹೊಸ ಹೊಸ ಪೋಸ್ಟರ್‌ಗಳನ್ನು ಸಹ ಹಂಚಿಕೊಂಡು ಗಮನ ಸೆಳೆಯುತ್ತಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪವಿತ್ರಾ ಗೌಡ ಜೀವನದಲ್ಲಿ ಯಶಸ್ವಿಯಾಗಲು ಸಲಹೆಯೊಂದನ್ನು ಕೊಟ್ಟಿದ್ದಾರೆ.

ಫ್ಯಾಷನ್ ಡಿಸೈನರ್ ಆಗಿ ತಮ್ಮದೇ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪವಿತ್ರಾ ಫ್ಯಾನ್ಸ್‌ಗೆ ಯಶಸ್ಸು ಕುರಿತು ಟಿಪ್ಸ್ ನೀಡಿದ್ದಾರೆ. ನಾನೊಂದು ವ್ಯವಹಾರ ಆರಂಭಿಸಿರುವುದಕ್ಕೆ ನಿಜಕ್ಕೂ ಅದೃಷ್ಟಶಾಲಿ. ಅದು ನನಗೆ ಆರ್ಥಿಕ, ಬೌದ್ಧಿಕ ಮತ್ತು ವೈಯಕ್ತಿಕವಾಗಿ ತೃಪ್ತಿಕರವಾಗಿ ಅಷ್ಟೇ ಇಲ್ಲ. ನಾನು ಉತ್ಸಾಹದಿಂದ ಬದುಕಲು ಅವಕಾಶ ಮಾಡಿಕೊಟ್ಟಿದೆ. ಜೀವನದಲ್ಲಿ ಯಶಸ್ಸು ಕಾಣಲು ಮೊದಲು ಮಾಡಬೇಕಾದ ಕೆಲಸವೆಂದರೆ ನಿಮ್ಮ ಕೆಲಸವನ್ನು ಪ್ರೀತಿಸುವುದು ಎಂದು ತಮ್ಮಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಜೈಲಿನಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅವರು ರೆಡ್ ಕಾರ್ಪೆಟ್ ಸ್ಟುಡಿಯೋ ಬೂಟಿಕ್ ಅನ್ನು ಮತ್ತೆ ಆರಂಭ ಮಾಡಿ ತಮ್ಮ ವೃತ್ತಿಯಲ್ಲಿ ತೊಡಗಿಕೊಂಡಿದ್ದು, ಅದರಲ್ಲೂ ಬ್ಯೂಸಿಯಾಗಿದ್ದಾರೆ. ಜೊತೆಗೆ ಅವರು ದೈವಭಕ್ತೆ ಆದ್ದರಿಂದ ಆಗಾಗ ದೇವಸ್ಥಾನಗಳಿಗೂ ಭೇಟಿ ನೀಡುತ್ತಲಿರುತ್ತಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!