Ad imageAd image

ಜಾಮೀನು ಅರ್ಜಿ ವಾಪಸ್‌ ಪಡೆದ ಪವಿತ್ರಾಗೌಡ 

Bharath Vaibhav
ಜಾಮೀನು ಅರ್ಜಿ ವಾಪಸ್‌ ಪಡೆದ ಪವಿತ್ರಾಗೌಡ 
WhatsApp Group Join Now
Telegram Group Join Now

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟಿ ಪವಿತ್ರಾ ಗೌಡ ಪರ ವಕೀಲರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್‌ ಪಡೆದಿದ್ದಾರೆ. ಹೈಕೋರ್ಟ್‌ ನಲ್ಲಿ ಜಾಮೀನು ಕೋರಿ ಪವಿತ್ರಾ ಗೌಡ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆ ನಿಗದಿಯಾಗಿತ್ತು.

ಸೆಷನ್ಸ್‌ ಕೋರ್ಟ್‌ ನಲ್ಲಿಯೇ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಪವಿತ್ರಾ ಗೌಡ ನಿರ್ಧಿರಿಸಿದ್ದು, ಇದೇ ಕಾರಣದಿಂದ ಹೈಕೋರ್ಟ್‌ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್‌ ಪಡೆದಿದ್ದಾರೆನ್ನಲಾಗಿದೆ.

ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾಗೌಡಗೆ ಜಾಮೀನು ದೊರಕುವ ಸಾಧ್ಯತೆ ಕಡಿಮೆ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ, ರೇಣುಕಾಸ್ವಾಮಿಯನ್ನು ಕೊಲ್ಲಲು ಪವಿತ್ರಾಗೌಡ ತನ್ನ ಹುಡುಗರಿಗೆ ಒತ್ತಾಯಿಸಿದ್ದಳು ಎಂದು ಪೊಲೀಸರು ತನಿಖೆಯಲ್ಲಿ ಹೊರಬಿದ್ದಿತ್ತು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!