ಗುರುಮಠಕಲ್ : ಸ್ವಚ್ಛ ಭಾರತ ಯೋಜನೆಯನ್ನು ದೇಶದ ಜನತೆ ಅದರಲ್ಲೂ ಗ್ರಾಮೀಣ ಭಾಗದ ಜನತೆಯ ಆರೋಗ್ಯ ಒಳಗೊಂಡಂತೆ ಇತರೆ ಅಗತ್ಯ ಮೂಲಭೂತ ಸೌಕರ್ಯ ಮತ್ತು ಗ್ರಾಮೀಣ ಭಾಗದ ಹಳ್ಳಿಗಳನ್ನು ಸ್ವಚ್ಛ ಮಾಡುವ ದೃಷ್ಟಿಯಿಂದ ಕೋಟ್ಯಂತರ ರೂ. ಅನುದಾನವನ್ನು ಸರ್ಕಾರವು ಮೀಸಲಿರಿಸಿದ್ದು ಆದರೇ ಎಂ ಟಿ ಪಲ್ಲಿ ಗ್ರಾಮ ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಬರುವುದು ಬಂದರೂ ಬಂದ ಅನುಧಾನವು ಯಾರೋ ಜೇಬಿಗೆ ಹೋಗುತ್ತಿದೆ ಯನ್ನುವುದು ಗೊತ್ತಾಗುತ್ತಿಲ್ಲ ಎನ್ನುವದ ಕಾಕಲವಾರ ಮತ್ತು ಎಂ ಟಿ ಪಲ್ಲಿ ಗ್ರಮದ ಗ್ರಾಮಸ್ಥರ ಆರೋಪವಾಗಿದೆ.
ಹೌದು ಯಾದಗಿರಿ ಜಿಲ್ಲೆಗೆ ಗುರುಮಠಕಲ್ ವ್ಯಪ್ತಿಗೆ ಬರುವ ಕಾಕಲವಾರ ಗ್ರಾಮ ಪಂಚಾಯತಿಯ ಆಡಳಿತ ಅಧಿಕಾರಿಗಳು ತಮ್ಮ ಪಂಚಾಯತ್ ಯವರು ಎಂ ಟಿ ಪಲ್ಲಿ ವ್ಯಪ್ತಿಗೆ ಬರುವ ಗ್ರಾಮಗಳ, ಗ್ರಾಮಸ್ಥರ ನೈರ್ಮಲ್ಯ ರಹಿತ ಗ್ರಾಮ ಗಳನ್ನು ನಿರ್ಮಿಸಲು ಮುಂದಾಗದೆ ಕೇವಲ ವಿಡಿಯೋ ಕಾಂಪ್ರೆನ್ಸ್ ಒಳಗೊಂಡಂತೆ
ವಿಡಿಯೋ ಕಂಪ್ರೆಸ್ನಲ್ಲಿ ಭಾಗವಹಿಸುವುದರ ಜೊತೆಗೆ ಪ್ರಬಲ ವ್ಯಕ್ತಿಗಳ ಮತ್ತು ಪ್ರಶ್ನಿಸುವ ಕೆಲವು ವ್ಯಕ್ತಿಗಳ ಹಾಗೂ ಅಧಿಕಾರಿಗಳಿಗೆ ಮೆಚ್ಚಿಗೆಯಾದರೂ ಸಾಕು ಎನ್ನುವ ಮನೋಭಾವನೆ ತಾಳಿದ್ದಾರೆ ಎನ್ನುವದು ಸಂಬಂದಿಸಿದ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.

ಈ ಕಾಕಲವಾರ ಗ್ರಾಮ ಪಂಚಾಯತ್ ವ್ಯಪ್ತಿಗೆ ಬರುವ ಎಂ ಟಿ ಪಲ್ಲಿ ಗ್ರಾಮವು ಅತ್ಯಂತ ಹಿಂದುಳಿದ ಗ್ರಾಮವಾಗಿದ್ದು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ, ಕೇಂದ್ರ ಸರ್ಕಾರದ ನೆರೇಗಾ ಯೋಜನೆ ಒಳಗೊಂಡಂತೆ ಸ್ವಚ್ಛ ಭಾರತ ಯೋಜನೆ ಮತ್ತು ರಾಜ್ಯ ಸರ್ಕಾರದ ಅನುದಾನಹಾಗೂ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಅನುದಾನವನ್ನು ಅಗತ್ಯ ಸೌಕರ್ಯಕ್ಕಾಗಿ ಉಪಯೋಗಿಸದೆ
ನಮ್ಮ ಗ್ರಾಮದಲ್ಲಿ ಸರಿಯಾದ ರೀತಿಯಲ್ಲಿ ಚರಂಡಿ ನಿರ್ಮಿಸದೆ ಇನ್ನಲೆ ಎಂ ಟಿ ಪಲ್ಲಿ ಗ್ರಾಮದ ಹರಿಜನವಡದಲ್ಲಿ ರಸ್ತೆ ಯುದ್ದಕ್ಕೂ ಮತ್ತು ಗ್ರಾಮದ ಓಣಿ ಓಣಿಗಳಲ್ಲಿ ಬಟ್ಟೆ ತೊಳೆದ ನೀರು, ಪಾತ್ರೆ ತೊಳೆದ ನೀರು ಅರಿಯುತ್ತಿದ್ದೂ ರಸ್ತೆ ಯಾವುದು ಚರಂಡಿ ಯಾವುದೋಯನ್ನುವುದು ಗೊತ್ತಾಗದೆ ದ್ವಿಚಕ್ರಸವಾರರು ವೃದ್ಧರು.ಮಕ್ಕಳು. ಜಾರಿ ಬಿದ್ದ ಘಟನೆ ನಡೆದಿವೆ. ಸಂಜೆಯಾದರು ಸಾಕು ಈ ಚರಂಡಿಯಂತ ನೀರಿನಲ್ಲಿ ಉತ್ಪತ್ತಿಯಾದ ಸೊಳ್ಳೆಗಳ ಕಾಟದಿಂದ ಗ್ರಾಮಸ್ಥರು ನಿದ್ರಿಸಿದಂತಾಗಿದೆ ಜೊತೆಗೆ ಸಂಕ್ರಾಂಮಿಕ ರೋಗಗಳು ಹರಡುತ್ತಿದ್ದು ಉಳ್ಳವರು ಖಾಸಗಿಯ ಆಸ್ಪತ್ರೆ ಮೊರೆ ಹೋಗುತ್ತಿದ್ದು ಇಲ್ಲದವರು ಸರ್ಕಾರಿ ಆಸ್ಪತ್ರೆಗೆ ತೆಳಲಿ ಸರಿಯಾದ ಚಿಕಿತ್ಸೆ ದೊರೆಯದೆ ನರಳಾಡುವ ಪರಿಸ್ಥಿತಿ ಉಲ್ಬಣ ಉಂಟಾಗಿದ್ದು ಈ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಒಳಗೊಂಡಂತೆ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನೇ ವಾಗಿಲ್ಲ ಕೂಡಲೇ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಎಂ ಟಿ ಪಲ್ಲಿ ಗ್ರಾಮದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಚರಂಡಿಯನ್ನು ನಿರ್ಮಿಸಿ ಸ್ವಚ್ಛತೆಗೆ ಮುದಾಗಬೇಕು ತಪ್ಪಿದರೆ ಹೋರಾಟ ಅನಿವಾರ್ಯ ಎಂದು ಗ್ರಮಸ್ಥರು ಅಸಮಾಧಾನ ವ್ಯಕ್ತಿ ಪಡಿಸಿದ್ದಾರೆ.
ವರದಿ : ರವಿ ಬುರನೋಳ್




