Ad imageAd image

ಬಕ್ರೀದ್‌ ಹಬ್ಬದ ನಿಮಿತ್ತ ಸಿಂದಗಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

Bharath Vaibhav
ಬಕ್ರೀದ್‌ ಹಬ್ಬದ ನಿಮಿತ್ತ ಸಿಂದಗಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ
WhatsApp Group Join Now
Telegram Group Join Now

ಸಿಂದಗಿ:- ಸಿಂದಗಿ ಪೊಲೀಸ್‌ ಠಾಣೆಯಲ್ಲಿ ಬುಧುವಾರ ಸಂಜೆ ಬಕ್ರೀದ್‌ ಹಬ್ಬದ ನಿಮಿತ್ತ ನಡೆದ ಶಾಂತಿ ಸಭೆಯಲ್ಲಿ ಸಭೆ ಉದ್ದೇಶಿಸಿ ಮಾತನಾಡಿ,ಪಿಎಸ್ಐ ಭೀಮಪ್ಪ ಅರಭಾವಿ ಬಕ್ರೀದ್‌ ಹಬ್ಬದ ನಿಮಿತ್ತ ಹಿಂದೂ ಮುಸ್ಲಿಂ ಬಾಂಧವರು ಒಗ್ಗಟ್ಟಾಗಿ ಶಾಂತಿಯಿಂದ ಹಬ್ಬ ಆಚರಿಸಬೇಕು. ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಯಾವುದೇ ಸಮುದಾಯವಾಗಿರಲಿ ಹಬ್ಬಗಳ ಆಚರಣೆ ವೇಳೆ ಅನ್ಯ ಧರ್ಮದ ಬಗ್ಗೆ ತಾತ್ಸಾರ ಮಾಡದೆ. ಶಾಂತಿಯುತವಾಗಿ ಆಚರಿಸಿದಾಗ ಮಾತ್ರ ಸಹಭಾಳ್ವೆ ಸಾಧ್ಯ. ಹೀಗಾಗಿ ಶಾಂತಿ ಭಂಗ ತರುವ ಯಾವುದೇ ಹೇಳಿಕೆಗಳು. ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡುವುದು. ಫಾರ್ವಡ್ ಮಾಡಿ ಮತ್ತೊಬ್ಬರಿಗೆ ನೋವುಂಟು ಮಾಡುವುದು ಕಾನೂನಿನಲ್ಲಿ ಅಪರಾಧವಾಗಿದ್ದು.

ಸಭೆಯಲ್ಲಿನ ಮುಖಂಡರು ಯುವಕರಿಗೆ ತಿಳಿ ಹೇಳಬೇಕೆಂದು ಮನವಿ ಮಾಡಿ…ಕಾನೂನು ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷ್ಯಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಶಾಂತಿ ಭಂಗ ತರುವವರ ವಿರುದ್ದ ಪೊಲೀಸರು ಕಣ್ಗಾವಲಿಟ್ಟಿದ್ದು. ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಸಭೆಯಲ್ಲಿ ಅಪರಾಧ ವಿಭಾಗ ಪಿಎಸ್ಐ ಅರವಿಂದ್ ಅಂಗಡಿ ಮಾತನಾಡಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ಶಾಂತತೆಯಿಂದ ಹಬ್ಬ ಆಚರಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಿಬ್ಬಂದಿ ಪರಸುರಾಮ ಗೋರವಗುಡಂಗಿ,ಜಕ್ಕಪ್ಪ ಕೋರೆ, ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮುಖಂಡರಾದ, ಎಂ,ಎ. ಖತ್ತಿಬ, ಬಸೀರಸಾಭ ಮರ್ತುರ್, ಮಹ್ಮದ್ ಆಳಂದ್, ಇರ್ಫಾನ್ ಬಾಗವಾನ, ಅಬ್ದುಲ್ ರಜಾಕ್ ಮುಜಾವಾರ, ಲುಕ್ಕಮಾನ, ರಹೀಮ್, ಲಕ್ಕಪ್ಪ ಐಬಿ. ರುಕ್ಕು ಮಲಘಾಣ, ರಜತ್ ತಾಂಬೆ, ರಾಜಣ್ಣಿ ನಾರಾಯಣಕರ್ ಸೇರಿದಂತೆ ಮುಸ್ಲಿಂ ಸಮುದಾಯದ ಅನೇಕ ಮುಖಂಡರು ಉಪಸ್ಥಿತಿರಿದ್ದರು.

ವರದಿ:-  ಮುಜಾವರ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!