ರಾಮದುರ್ಗ: ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬಕ್ರೀದ್ ಹಬ್ಬ ಆಚರಣೆ ಅಂಗವಾಗಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಹಿಂದೂ ಮುಸ್ಲಿಂ ಮುಖಂಡರೊಂದಿಗೆ ಸಿ ಪಿ ಐ ವಿನಾಯಕ ಬಡಿಗೇರ್ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.

ರಾಮದುರ್ಗ psi ಸುನಿತಾ ಮುನ್ಯಾಳ ಮಾತನಾಡಿ, ‘ಇದೇ 7ರಂದು ರಾಮದುರ್ಗ ಪಟ್ಟಣ ಮತ್ತು ತಾಲ್ಲೂಕಿನ ಗ್ರಾಮಗಳಲ್ಲಿ ನಡೆಯಲಿರುವ ಬಕ್ರೀದ್ ಆಚರಣೆ ನಡೆಯಲಿದ್ದು, ಮುಸ್ಲಿಂ ಮುಖಂಡರು ಶಾಂತಿ, ಸೌಹಾರ್ದತೆ ಕಾಪಾಡಿಕೊಂಡು ಬಕ್ರೀದ್ ಹಬ್ಬವನ್ನು ಆಚರಣೆ ಮಾಡಬೇಕು ಎಂದರು.
ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.
ರಾಮದುರ್ಗ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿನಿಂದಲೂ ಸೌಹಾರ್ದತೆಯಿಂದ ಹಬ್ಬ ಆಚರಿಸಿಕೊಂಡು ಬರಲಾಗಿದೆ, ಮುಂದಿನ ದಿನಗಳಲ್ಲೂ ಇದೇ ಸಂಸ್ಕೃತಿ ಮುಂದುವರಿಸಿಕೊಂಡು ಹೋಗಬೇಕು,ಸಾಮೂಹಿಕ ಪ್ರಾರ್ಥನೆಗೆ ತೆರಳುವಾಗ ಸಾರ್ವಜನಿಕರಿಗೆ ತೊಂದರೆಯಾಗದಂತೆ, ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಸಮುದಾಯದ ಮುಖಂಡರು ನಿರ್ವಹಣೆ ಮಾಡಬೇಕು, ಹೆಚ್ಚಿನ ಗದ್ದಲ ಗಲಾಟೆಯಾಗದಂತೆ ನಿಗಾವಹಿಸಬೇಕು ಎಂದು CPI ವಿನಾಯಕ ಬಡಿಗೇರ್ ತಿಳಿಸಿದರು.
ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ,ಶಬ್ಬೀರ್ ಅಹ್ಮದ್ ಕಾಜಿ, ಮಾತನಾಡಿ ಸಲೇಹೆ ಸೂಚನಗಳು ನೀಡಿದರು.
ಈ ಸಂಧರ್ಭದಲ್ಲಿ ಅಂಜುಮನ್ ಇಸ್ಲಾಂ ಕಮೀಟಿಯ ಅಧ್ಯಕ್ಷ, ಶಬ್ಬೀರ್ ಅಹ್ಮದ್ ಕಾಜಿ, ಶ್ರಯಸ್ ವಾಲಿ, ಶಫಿ ಬೆಣ್ಣಿ, ಚನ್ನಪ್ಪ ಮಾದರ, ಜಹುರ್ ಹಾಜಿ, ತೌಕೀರ್ ಖತಿಬ್,ರಾಜು ಶಲವಡಿ, ಗೈಬು ಜೈನೆಖಾನ,ಸುಭಾಸ್ ಗೋಡಖೆ ಇನ್ನು ಹಿಂದೂ ಮುಸ್ಲಿಂ ಮುಖಂಡರು ಯುವಕರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕಲಾದಗಿ




