Ad imageAd image

ಬಾದಾಮಿ ಪೊಲೀಸ್ ಇಲಾಖೆಯಿಂದ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆಯ ಪೂರ್ವಭಾವಿ ಶಾಂತಿ ಸಭೆ

Bharath Vaibhav
ಬಾದಾಮಿ ಪೊಲೀಸ್ ಇಲಾಖೆಯಿಂದ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆಯ ಪೂರ್ವಭಾವಿ ಶಾಂತಿ ಸಭೆ
WhatsApp Group Join Now
Telegram Group Join Now

ಬಾಗಲಕೋಟೆ : ಜಿಲ್ಲೆ ಬಾದಾಮಿಯಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆಯ ಪ್ರಯುಕ್ತ ಬಾದಾಮಿ ಪೊಲೀಸ್ ಇಲಾಖೆ ಯಿಂದ ಪೂರ್ವಭಾವಿ ಶಾಂತಿ ಸಭೆ ನಡೆಯಿತು. ಬಾದಾಮಿ ನಗರದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಶಾಂತಿ ಸಭೆ ನಡೆಯಿತು.

ಸಭೆಯಲ್ಲಿ ಬಾದಾಮಿ ತಾಲೂಕಿನ ವಿವಿಧ ಗಜಾನನ ಮಂಡಳಿಯ ಮುಖಂಡರುಗಳು ಹಾಗೂ ಎಲ್ಲಾ ಸಂಘಟನೆಗಳ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿ ಕಾನೂನಿನ ನಿಯಮಗಳ ಬಗ್ಗೆ ಬಾದಾಮಿ ಪೊಲೀಸ್ ಠಾಣೆಯ ಪಿ. ಎಸ್. ಐ. ಸರಕಾರದ ಸೂಕ್ತ ಸುರಕ್ಷಾ ಕ್ರಮಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿ ಹೇಳಿ ತಾಲೂಕಿನ ಬೇರೆ ಬೇರೆ ಇಲಾಖೆಗಳ ನೆರವು ಪಡೆದು ಸುರಕ್ಷಿತವಾಗಿ ಜೀವಹಾನಿಯಾಗದ ಹಾಗೆ ಶಾಂತಿಯುತವಾಗಿ ಗಣೇಶ ಹಬ್ಬವನ್ನು ಆಚರಿಸಬೇಕು ನಿಮ್ಮ ಸಹಕಾರ ನಮಗೆ ಕೊಡಿ ನಮ್ಮ ಸಹಕಾರ ನಿಮಗೆ ಇರುತ್ತೆ ಎಂದು ಪರಸ್ಪರ ಸಮಾಲೋಚನೆ ನಡೆಸಿ ವಿಷಯ ಪ್ರಸ್ತಾವನೆ ಮಾಡಿದರು.

ಇನ್ನುಳಿದಂತೆ ಡಿ. ವಾಯ್. ಎಸ್. ಪಿ. ವಿಶ್ವನಾಥರಾವ್ ಕುಲಕರ್ಣಿ ಹಬ್ಬಗಳನ್ನು ವಿಜೃಂಭನೆಯ ಜೊತೆಗೆ ಸುರಕ್ಷತೆಯಿಂದ ನೀವೆಲ್ಲರೂ ಜವಾಬ್ದಾರಿವಹಿಸಿ ಗಣೇಶ್ ಪ್ರತಿಷ್ಟಾಪನೆ ಹಾಗೂ ವಿಸರ್ಜನೆ ಮಾಡಬೇಕು ಎಂದು ಮನವಿ ಮಾಡಿದರು. ಬಾದಾಮಿ ತಹಶೀಲ್ದಾರ್ ಜೆ. ಬಿ. ಮಜ್ಜಗಿ ಹಾಗೂ ಬಾದಾಮಿ ಪೊಲೀಸ್ ಠಾಣೆಯ ತಾಲೂಕಾ ವೃತ್ತ ನಿರೀಕ್ಷಕರಾದ( ಸಿ. ಪಿ. ಐ.) ಕರಿಯಪ್ಪ. ಬನ್ನಿ ಶಾಂತಿ ಸಭೆಯಲ್ಲಿ ತಾಲೂಕಿನ ವಿವಿಧ ಗಜಾನನ ಮಂಡಳಿ ಮುಖಂಡರು ಹಾಗೂ ಸಂಘಟನೆಗಳ ಮುಖಂಡರುಗಳ ಜೊತೆ ಚರ್ಚಿಸಿ ಗಣೇಶ ಹಬ್ಬದಲ್ಲಿ ತಮಗೆ ಎಲ್ಲಾ ರೀತಿಯಿಂದ ಅನುಕೂಲ ಆಗುವ ಹಾಗೆ ಸಿಂಗಲ್ ವಿಂಡೋ ತೆರೆದಿದ್ದೇವೆ ಇಲ್ಲಿ ಒಂದೇ ಕಡೆ ನಿಮಗೆ ಪರವಾನಿಗೆ ಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿ ಎಲ್ಲರೂ ನಮಗೆ ಸಹಕಾರ ನೀಡಬೇಕು ಇಲಾಖೆಯಿಂದ ನಿಮಗೆ ನಮ್ಮ ಸಹಕಾರ ಇರುತ್ತೆ ಶಾಂತಿಯುತವಾಗಿ ಹಬ್ಬವನ್ನು ಆಚರಿಸೋಣ ಎಂದು ಸಲಹೆ ನೀಡಿದರು.

ತಾಲೂಕಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ ತಮ್ಮ ಇಲಾಖೆ ಯಿಂದ ಇರಬಹುದಾದ ವ್ಯವಸ್ಥೆಗಳ ಬಗ್ಗೆ ವಿವರಿಸಿ ಹೇಳಿ ಗಣೇಶ್ ಹಬ್ಬದ ಹಿಂದಿರುವ ಇತಿಹಾಸ ಹಾಗೂ ಉದ್ದೇಶಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು. ಇನ್ನುಳಿದಂತೆ ತಹಶೀಲ್ದಾರ ನಿಮ್ಮೆಲ್ಲರ ಸಹಕಾರ ನಮಗೆ ಇರಲಿ ಎಂದು ಮನವಿ ಮಾಡಿದರು.

ಶಾಂತಿಸಭೆಯಲ್ಲಿ ಬಾದಾಮಿ ತಹಶೀಲ್ದಾರ್ ಜೆ. ಬಿ. ಮಜ್ಜಗಿ, ಪೊಲೀಸ್ ಇಲಾಖೆ ಡಿ. ವಾಯ್. ಎಸ್ ಪಿ. ವಿಶ್ವನಾಥ. ಕುಲಕರ್ಣಿ, ಸಿ. ಪಿ. ಐ. ಕರಿಯಪ್ಪ ಬನ್ನಿ, ಬಾದಾಮಿ ಪಿ. ಎಸ್. ಐ. ವಿಠಲ್ ನಾಯಿಕ, ತಾಲೂಕಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ, ತಾಲೂಕಾ ಅಬಕಾರಿ ಉಪ ನಿರೀಕ್ಷಕರಾದ ವಾಯ್. ಎಸ್. ಮುಧೋಳ,ವಾಯ್.,
ಪುರಸಭೆ ಮುಖ್ಯಾಧಿಕಾರಿ ಬಂದೇನವಾಜ್ ಡಾ0ಗೆ, ತಾಲೂಕಾ ಹೆಸ್ಕಾಮ್ ಅಧಿಕಾರಿ, ಹಾಗೂ ತಾಲೂಕಿನ ವಿವಿಧ ಗಜಾನನ ಮಂಡಳಿಯ ಮುಖಂಡರುಗಳು ಹಾಗೂ ಸಂಘಟನೆಗಳ ಮುಖಂಡರುಗಳು, ಹಿರಿಯರು ಉಪಸ್ಥಿತರಿದ್ದರು.

ವರದಿ: ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!