Ad imageAd image

ಸಕಾಲಕ್ಕೆ ಸಾಲ ಮರುಪಾವತಿಸುವ ಸದಸ್ಯರಿಂದ ಪೀಕಾರ್ಡ್ ಬ್ಯಾಂಕ್ ಏಳ್ಗೆ.

Bharath Vaibhav
ಸಕಾಲಕ್ಕೆ ಸಾಲ ಮರುಪಾವತಿಸುವ ಸದಸ್ಯರಿಂದ ಪೀಕಾರ್ಡ್ ಬ್ಯಾಂಕ್ ಏಳ್ಗೆ.
WhatsApp Group Join Now
Telegram Group Join Now

ಸಿರುಗುಪ್ಪ : ಅಗತ್ಯಾನುಸಾರ ಸಾಲವನ್ನು ಪಡೆದು ಸಕಾಲಕ್ಕೆ ಮರುಪಾವತಿ ಮಾಡಿರುವ ಸರ್ವ ಸದಸ್ಯರು ಮತ್ತು ರೈತರು ಈ ಪಿಕಾರ್ಡ್ ಬ್ಯಾಂಕಿನ ಏಳ್ಗೆಗೆ ಕಾರಣವೆಂದು ಅಧ್ಯಕ್ಷರಾದ ಚೊಕ್ಕಬಸವನಗೌಡ ತಿಳಿಸಿದರು.

ನಗರದ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ನಡೆದ ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕಿನ ಆಡಳಿತ ಮಂಡಳಿಯಿಂದ ನಡೆದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಜನ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಣ್ಣನಗೌಡ ಸಿದ್ದೇಗೌಡ್ರು 1963 ರಲ್ಲಿ ಆರಂಭಿಸಿದ ಸಹಕಾರಿಯು ಇಂದು ಹೆಮ್ಮರವಾಗಿ ಬೆಳೆದಿದ್ದು, ಅದನ್ನು ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ಬೆಳೆಯಲು ಸಾಧ್ಯವಾಗಿದೆಂದರು.
ಮುಂದಿನ ದಿನಗಳಲ್ಲೂ ಇದೇ ರೀತಿ ಬೆಳೆಸಿಕೊಂಡು ಹೋಗಬೇಕಾದ ಕರ್ತವ್ಯ ನಮ್ಮೆಲ್ಲರ ಮೇಲಿದೆ.

ಒಳ್ಳೆಯ ಹಿತದೃಷ್ಟಿಯನ್ನು ಇಟ್ಟುಕೊಂಡು ಸಕಾಲಕ್ಕೆ ಸಾಲ ಪಡೆದು ಅದರಂತೆ ಮರುಪಾವತಿ ಮಾಡಿ ಇನ್ನು ಹೆಚ್ಚಿನ ಅಭಿವೃದ್ದಿ ಕಾರ್ಯಕ್ಕೆ ಕಾರಣೀಭೂತರಾಗಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಪ್ರಸಕ್ತ ಸಾಲಿನಲ್ಲಿ ನಬಾರ್ಡ್ನಿಂದ ಪಡೆದ ಸಾಲ, ಸದಸ್ಯರುಗಳಿಗೆ ಸಾಲ ವಿತರಣೆ, ಮರುಪಾವತಿ ಹಾಗೂ ಬ್ಯಾಂಕಿನಿಂದ ಸೌಲಭ್ಯಗಳು, ಹಾಗೂ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳ ಬಗ್ಗೆ ವ್ಯವಸ್ಥಾಪಕರಾದ ತಿಪ್ಪಣ್ಣ ಬನಸೋಡೆ ಅವರು ವಿವರಣೆ ನೀಡಿದರು.

2024-25ನೇ ಸಾಲಿನಲ್ಲಿ ನಿವ್ವಳ ಲಾಭಾಂಶ 1ಕೋಟಿ 97ಲಕ್ಷ 59ಸಾವಿರ ಇರುತ್ತದೆ. ಇದರಲ್ಲಿ ನಬಾರ್ಡ್ ಲಾಭಾಂಶ 31ಲಕ್ಷ 30ಸಾವಿರವಿದ್ದು, ಬ್ಯಾಂಕಿಂಗ್ ನಿವ್ವಳ ಲಾಭಾಂಶ 1ಕೋಟಿ 65ಲಕ್ಷ 4ಸಾವಿರ ಇರುತ್ತದೆ.
ಕರೂರು ಬ್ಯಾಂಕಿನ ಲಾಭಾಂಶ 1ಲಕ್ಷ 15ಸಾವಿರ ಮಾತ್ರ ಇರುತ್ತದೆ.

ಕಾಸ್ಕಾರ್ಡ್ ಬ್ಯಾಂಕಿಗೆ 2025-26ನೇ ಸಾಲಿಗೆ ಬಡ್ಡಿ ಕಾಯ್ದಿರಿಸಿದ ನಂತರ 32ಲಕ್ಷ 45ಸಾವಿರಗಳಿರುತ್ತದೆಂದು ಮಹಾಜನ ಸಭೆಯಲ್ಲಿ ಓದಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಬ್ಯಾಂಕಿನ ನಿರ್ವಹಣೆಗೆ ಸಹಕರಿಸಿದ ವ್ಯವಸ್ಥಾಪಕ, ಕ್ಷೇತ್ರಾಧಿಕಾರಿಗಳು, ಸಿಬ್ಬಂದಿಗಳು, ವಲಯಗಳ ನಿರ್ದೇಶಕರು, ಅವಧಿಯೊಳಗೆ ಮರುಪಾವತಿ ಮಾಡಿದ ರೈತ ಸದಸ್ಯರುಗಳನ್ನು ಸನ್ಮಾನಿಸಲಾಯಿತು.

ವರದಿ : ಶ್ರೀನಿವಾಸ ನಾಯ್ಕ. 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!