ಸಿರುಗುಪ್ಪ : ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ಬಿ ಎಂ ಸೂಗೂರು ಗ್ರಾಮ ಪಂಚಾಯತಿಯಲ್ಲಿ ಚುನಾವಣಾ ಅಧಿಕಾರಿ ಪವನ್ ಕುಮಾರ್ ದಂಡಪ್ಪನವರ್ ಮತ್ತು ಗ್ರಾಮ ಪಂಚಾಯಿತಿಯ ವಿಸ್ತೀರ್ಣ ಅಧಿಕಾರಿಗಳ ಸಮ್ಮುಖದಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು . ಶ್ರೀಮತಿ ಪೀರಮ್ಮ ಹೊನ್ನೂರ್ಸಾಬ್ ಅವರು ಗ್ರಾಮ ಪಂಚಾಯಿತಿಯ ಹಾಲಿ ಸರ್ವ ಸದಸ್ಯರ ಒಮ್ಮತದೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಲಾಯಿತು. ಬಿ ಎಂ ಸೂಗೂರು ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಸರ್ವಾನುಮತದಿಂದ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರನ್ನಾಗಿ ಶ್ರೀಮತಿ ಪೀರಮ್ಮ ಹೊನ್ನೂರ್ ಸಾಬ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಂತರ ಮಾತನಾಡಿ ಚುನಾವಣಾ ಅಧಿಕಾರಿ ಪವನ್ ಕುಮಾರ್ ದಂಡಪ್ಪನವರ್ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಿಗೆ ಅಧಿಕಾರವನ್ನು ಹಸ್ತಾಂತರಿಸಿ ಗೌರವದೊಂದಿಗೆ ಸನ್ಮಾನಿಸಿದರು. ಇದೇ ವೇಳೆ ವಿಸ್ತೀರ್ಣಧಿಕಾರಿ ವೀರನಗೌಡ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಪೀರಮ್ಮ ಹೊನ್ನೂರ್ ಸಾಬ್ ಪೊಲೀಸ್ ಇಲಾಖೆಯ ಎ ಎಸ್ ಐ ಎಸ್ ವೆಂಕಟರಮಣ, ಅಲ್ಲದೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಪಿ ಹುಸೇನಪ್ಪ ನಾಯಕ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಸಿ ಗಿರೀಶ್ ಗೌಡ ಎಪಿಎಂಸಿ ಮಾಜಿ ಅಧ್ಯಕ್ಷರು, ಸಿ ಚೆನ್ನ ಬಸವರೆಡ್ಡಿ ಕಾಂಗ್ರೆಸ್ ಯುವ ಮುಖಂಡರು, ಸಿ ಹೆಚ್ ಕೇಶಪ್ಪ ನಾಯಕ್, ಎಚ್ ನಾಗಪ್ಪ, ಇನ್ನಿತರ ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ನಾಯ್ಕ



