ಗುರುಮಠಕಲ್ : ಗುರುಮಾಠಕಲ್ ತಾಲೂಕಿನಲ್ಲಿ ಇಂದು ಮದ್ಯಾಹ್ನ ಗುಡುಗು ಸಹಿತ ಮಳೆಗೆ ಪಟ್ಟಣದಲ್ಲಿ ಮಳೆರಾಯಾನ ಆರ್ಭಟ ಕ್ಕೆ ತತ್ತರಿಸಿದ ಜನರು ಹಾಗೂ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರ್ಭಟಿಸುತ್ತಿದ್ದು, ಜನ ಜೀವನ ಗಾಳಿ ಗುಡುಗು ಸಮೇತ ಮಳೆಗೆ ಜನರು ಹೈರಾಣ ಗಿದ್ದಾರೆ
ಪಟ್ಟಣದ ಬಹುತೇಕ ಅಂಗಡಿಗಳಿಗೆ ನೀರು ನುಗ್ಗಿ ಮತ್ತು ಬಿದಿ ಬದಿ ವ್ಯಾಪಾರಿಗಳು ಕಂಗಲಾಗಿದ್ದಾರೆ ಮತ್ತು ಅಂಗಡಿ ಒಳಗಡೆ ಹೋಗಿರುವ ನೀರು ತೆಗೆಯಲು ಅರಸರಾಸಪಟ್ಟ ಅಂಗಡಿ ಮಾಲೀಕರು.
ಇದು ಎಲ್ಲದಕ್ಕೆ ಕಾರಣವಾದದ್ದು ಪಟ್ಟಣದ ಮುಖ್ಯ ರಸ್ತೆಯ ಸಿ ಸಿ ರಸ್ತೆಯ ಕಾಮಗಾರಿ ಕೆಲಸ ನಡೆಯುತ್ತಿದ್ದು, ರಸ್ತೆ ಎತ್ತರದಲ್ಲಿ ಹಾಕುತ್ತಿರುವ ಪರಿಣಾಮ ಕೆಳ ಭಾಗದಲ್ಲಿರುವ ಅಂಗಡಿಗಳಿಗೆ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ. ಇನ್ನೂ ಎರಡು ಗಂಟೆಗಳಿಂದ ಸತತವಾಗಿ ಸಿಡಿಲು, ಆಣೆಕಲ್ಲು ಮಳೆ ಬೀಳುತ್ತಿದ್ದು, ಮಳೆ ನಿಂತಾಗ ಮಾತ್ರ ಎಲ್ಲೆಲ್ಲಿ ಏನು ಹಾನಿಯಾಗಿದೆ ಎಂದು ತಿಳಿದು ಬರುತ್ತೆ. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನವಾರಿಸ ಬೇಕು ಎಂದು ಅಂಗಡಿ ಮಾಲೀಕರು ಕಿಡಿ ಕರಿದ್ದಾರೆ.
ವರದಿ : ರವಿ ಬುರನೋಳ್