ಸಿಂಧನೂರು: ಏಪ್ರಿಲ್ ೨೫ ಭಯಂಕರ ಗಾಳಿ ಮಳೆಗೆ ಸಿಂಧನೂರು ಜನತಾ ಕಾಲೋನಿಯಲ್ಲಿ 4 ಕ್ಕೂ ಹೆಚ್ಚು ಶೆಡ್ ಗಳು ಧರೆಗೆ ಉರುಳಿ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿದ್ದು ಜನರು ಪ್ರಾಣಪಾಯಂದಿಂದ ಪರಾಗಿದ್ದು
ನಿನ್ನೆ ದಿ : 25.4.2025 ರಾತ್ರಿ ಸುಮಾರು 7.30 ರಿಂದ 12 ಗಂಟೆಯವರೆಗೆ ಗುಡುಗು ಸಿಡಿಲಿನಿಂದ ಕೂಡಿದ ಭಯಂಕರ ಗಾಳಿ ಮಳೆಗೆ ಸಿಂಧನೂರು ವಾರ್ಡ್ ನ. 25 ಜನತಾ ಕಾಲೋನಿಯ ಮಹಿಮೂದ ಬೇಗಂ, ಶ್ರೀದೇವಿ ಕೊರವರ, ರಂಜಾನ್ ಹಾಗೂ ಅಕ್ಷತಾ ಎನ್ನುವವರ 4 ಕ್ಕೂ ಹೆಚ್ಚು ತಗಡಿನ ಶೆಡ್ ಗಳು ಭಯಂಕರ ಗಾಳಿಗೆ ಹಾರಿ ಬಿದ್ದು 2 ವಿದ್ಯುತ್ ಕಂಬಗಳು ಧರೆಗೆ ಉರುಳಿದೆ ಶೆಡ್ ಮೇಲೇಯೂ ಕೂಡಾ ಮರದ ರೆಂಬೆ ಕೊಂಬೆ ಬಿದ್ದು ತಗಡು ಮುರಿದು ನೀರು ಮನೆ ಸೇರಿದೆ ತಗಡುಗಳು ಮುರಿದು ಬಿದ್ದಿದ್ದು ಮನೆಯವರು ಹೊರಗಡೆ ಹೋಗಿದ್ದರಿಂದ ಬಚಾವಾಗಿದ್ದಾರೆ ಮನೆಯಲ್ಲಿ ಇದ್ದ ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ದವಸ ಧಾನ್ಯಗಳು ಮಳೆಗೆ ಸಿಲುಕಿ ಕುಟುಂಬಗಳು ಪರಿತಪಿಸುವಂತಾಗಿದೆ
ಇದಲ್ಲದೆ ನಗರದಲ್ಲಿ ಭಯಂಕರ ಗಾಳಿ ಮಳೆ ಗುಡುಗು ಸಿಡಿಲಿನಿಂದ ಮರ ಗಿಡಗಳು ಹಾಗೂ ಕಟೌಟುಗಳು ನೆಲಕ್ಕುರಳಿದ್ದು ಜನಗಳು ಪ್ರಾಣಾಪಯದಿಂದ ಪಾರಾಗಿದ್ದಾರೆ
ನಗರಸಭೆ ಹಾಗೂ ತಾಲೂಕು ಆಡಳಿತ ಸಂತ್ರಸ್ಥರ ನೆರವಿಗೆ ಬಂದು ಪರ್ಯಾಯ ವ್ಯವಸ್ಥೆಗೆ ಮತ್ತು ಪರಿಹಾರಕ್ಕೆ ಮುಂದಾಗಲು
ಎಂ. ಗಂಗಾಧರ್ ಸಿಪಿಐಎಂಎಲ್ ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ
ಬಸವರಾಜ ಬುಕ್ಕನಹಟ್ಟಿ