ಚಿಟಗುಪ್ಪ : ಸಂಘ ಸಂಸ್ಥೆಗಳು ಅಭಿವೃದ್ಧಿಯಾಗಬೇಕಾದರೆ ಜನರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಪಿಕೆಪಿಎಸ್ ಅಧ್ಯಕ್ಷ ವೈಜೀನಾಥ ವೀರರೆಡ್ಡಿ ಹೇಳಿದರು.
ಹೌದು ತಾಲ್ಲೂಕಿನ ಮಂಗಲಗಿ ಗ್ರಾಮದ ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘ ಸದ್ಯದ ಸ್ಥಿತಿಯಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ.ಸಾಲ ಪಡೆದ ರೈತರು ಪ್ರತಿ ವರ್ಷ ಮರು ಪಾವತಿ ಮಾಡಬೇಕು,ಇಲ್ಲವೇ ಅದಕ್ಕೆ ಆದಂತಹ ಬಡ್ಡಿಯಾದರು ಪಾವತಿಸಬೇಕು.ಆಗ ತಾನಾಗಿಯೇ ಸಂಘ ಅಭಿವೃದ್ಧಿಯಾಗುತ್ತದೆ.ರೈತರು ಇದನ್ನು ಗಮನದಲ್ಲಿ ಇಟ್ಟುಕೊಂಡು ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಅಧ್ಯಕ್ಷ ವೈಜೀನಾಥ ವೀರರೆಡ್ಡಿ ಅವರು ಸಭೆಯಲ್ಲಿ ರೈತರಿಗೆ ಮನವರಿಕೆ ಮಾಡಿದರು.
ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕೇಳಕೇರಿ ವಾರ್ಷಿಕದಲ್ಲಿ ನಿರ್ವಹಿಸಿದ ಕಾರ್ಯ ಚಟುವಟಿಕೆ ಮತ್ತು ಒಟ್ಟು ಜಮಾ ಮತ್ತು ಖರ್ಚು ವೆಚ್ಚ ಕುರಿತು ಸಭೆಯಲ್ಲಿ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಪಿಕೆಪಿಎಸ್ ಸಂಘದ ಉಪಾಧ್ಯಕ್ಷ ವಿಠ್ಠಲ ಅರ್ಕಿ,ನಿರ್ದೇಶಕರಾದ ಭೀಮಣ್ಣ ಚಿನಕೇರಾ,ಇಬ್ರಾಹಿಂ ಪಟೇಲ,ಶ್ರೀಮತಿ ಬಕ್ಕಮ್ಮ,ಮಾಣಿಕ ರೆಡ್ಡಿ,ಶಿಫಿಯಾ ಬೇಗಂ,ದೇವಿಂದ್ರ ನಿಂಗದಳ್ಳಿ, ರಮೇಶ ಮಾಲೇಕರ ಸೇರಿದಂತೆ ಪಿಕೆಪಿಎಸ್ ನಿರ್ದೇಶಕರು,ಸಿಬ್ಬಂದಿಗಳು,ರೈತರು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಸಜೀಶ ಲಂಬುನೋರ್




