Ad imageAd image

ಕಾಂಗ್ರೆಸ ಪಕ್ಷದಿಂದ “ನರೇಗಾ ಉಳಿಸಿ” ಜನಾಂದೋಲನ

Bharath Vaibhav
ಕಾಂಗ್ರೆಸ ಪಕ್ಷದಿಂದ “ನರೇಗಾ ಉಳಿಸಿ” ಜನಾಂದೋಲನ
WhatsApp Group Join Now
Telegram Group Join Now

ಹಳಿಯಾಳ : ಕಾಂಗ್ರೆಸ ಪಕ್ಷದಿಂದ “ನರೇಗಾ ಉಳಿಸಿ” ಜನಾಂದೋಲನಕೇಂದ್ರ ಸರ್ಕಾರವು ಮನರೇಗಾ ಯೋಜನೆಯನ್ನು ರದ್ದು ಮಾಡುವ ಮೂಲಕ ಗ್ರಾಮೀಣ ಭಾರತದ ಕೋಟ್ಯಂತರ ಬಡಜನರ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ.ಹಿಂದಿನ ಯುಪಿಎ ಸರ್ಕಾರ ಮನರೇಗಾ ಯೋಜನೆಯ ಮೂಲಕ‌ ಬಡಜನರಿಗೆ ಉದ್ಯೋಗದ ಹಕ್ಕನ್ನು ಕಾನೂನಾತ್ಮಕಗೊಳಿಸಿತ್ತು. ಆದರೆ ಈಗಿನ ಎನ್‌ಡಿಎ ಸರ್ಕಾರ ಮನರೇಗಾ ಕೈಬಿಟ್ಟು,ವಿಬಿ ಗ್ರಾಮ ಜಿ ಎಂಬ ಹೊಸ ಯೋಜನೆ ಜಾರಿ ಮಾಡುತ್ತಿದೆ.

ಗ್ರಾಮ ಸ್ವರಾಜ್ಯದ ಕನಸು ಕಂಡ ಮಹಾತ್ಮ ಗಾಂಧಿಯವರ ಹೆಸರೂ ಇಲ್ಲದ, ಉದ್ಯೋಗದ ಖಾತರಿಯನ್ನೂ ನೀಡದ ಈ ಯೋಜನೆಯಿಂದ ಕೂಲಿಕಾರ್ಮಿಕರು,ರೈತರು, ಮಹಿಳೆಯರ ಬದುಕು ದುಸ್ಥರಗೊಳ್ಳಲಿದೆ.ಈ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ “ನರೇಗಾ ಉಳಿಸಿ” ಜನಾಂದೋಲನ ಅಂಗವಾಗಿ ಕಾಂಗ್ರೆಸ್ ಸಮಿತಿ ಹಳಿಯಾಳ ವತಿಯಿಂದ ಪಟ್ಟಣದ ಶ್ರೀ ಕಿತ್ತೂರು ರಾಣಿ ಚೆನ್ನಮ್ಮ, ಶ್ರೀ ಬಸವೇಶ್ವರ,ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಪ್ರತಿಮೆಗಳಿಗೆ ಮಾನ್ಯ ಶಾಸಕರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವುದರೊಂದಿಗೆ “ಮನರೇಗಾ ಉಳಿಸಿ”ಎಂಬ ಘೋಷವಾಕ್ಯಗಳೊಂದಿಗೆ ಪಾದಯಾತ್ರೆಯ ಮೂಲಕ ಹೋರಾಟ ನಡೆಸಿ ಮುಂಚಿನ ಮನರೇಗಾ ಯೋಜನೆಯನ್ನು ಮುಂದುವರೆಸಲು ತಹಸಿಲ್ದಾರರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪಾದಯಾತ್ರೆಯಲ್ಲಿ ಬಿಸಿಸಿ ಅಧ್ಯಕ್ಷರು, ಕೆಪಿಸಿಸಿ ಸದಸ್ಯರು, ಪ್ರಮುಖ ಮುಖಂಡರು, ವಿವಿಧ ಘಟಕದ ಅಧ್ಯಕ್ಷರು, ಸ್ಥಳೀಯ ಸಂಸ್ಥೆಯ ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!