ಮಲ್ಲಮ್ಮನ ಬೆಳವಡಿ : ಕುಡಿಯುವ ನೀರಿಗಾಗಿ ಜನರ ಪರದಾಟ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂದಿಹಾಳ ಗ್ರಾಮದ ಅಳಗೋಡಿ ಓನಿಯ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿದೆ ಜೆ ಜೆ ಎಂ ಯೋಜನೆಯ ಮೂಲಕ ನೀರು ಒದಗಿಸಬೇಕಾದ ಪಂಚಾಯಿತಿ ಅಧಿಕಾರಿಗಳು ಇತ್ತ ವಿಚಾರಿಸುತ್ತಿಲ್ಲ.

ನಲ್ಲಿ ಇದ್ದರು ನಲ್ಲಿಯಲ್ಲಿ ನೀರು ಬರುತ್ತಿಲ್ಲ ಆಗೊಮ್ಮೆ ಈಗೊಮ್ಮೆ ನೀರು ಬಂದರು ಕೊಳಚೆ ನೀರು ಬರುತ್ತಿದೆ ಅದು ಅಲ್ಲದೆ ಮಳೆಗಾಲದ ಸಮಯ ಮಲೇರಿಯ ಡೆಂಗ್ಯೂ ರೋಗಗಳು ಹರಡುವ ಅಪಾಯವಿದೆ ಕೊಳಚೆ ನೀರು ಇದಕ್ಕೆಲ್ಲ ಕಾರಣವಾಗುತ್ತಿದೆ ಗ್ರಾಮದ ಪಂಚಾಯಿತಿಯ ಸದಸ್ಯರಿಗೆ ಹೇಳಿದರು.
ಪ್ರಯೋಜನವಾಗಿಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ವಿನಂತಿಸಿದರು ಸೌಜನ್ಯಕ್ಕಾದರೂ ಬೆಟ್ಟಿ ಕೊಟ್ಟಿಲ್ಲ ಜನರ ಸಂಕಟ ಅರ್ಥ ಮಾಡಿಕೊಳ್ಳದೆ,ನಾನೇನು ಮಾಡಲಿ ನನಗೇನು ಸಂಬಂಧ ನೀರು ಬರದಿದ್ದರೆ ಬೇರೆ ಕಡೆಯಿಂದ ನೀರು ತನ್ನಿ ಕೊಳಚೆ ನೀರು ಬಂದರೆ ಕಾಯಿಸಿ ಕುಡಿಯಿರಿ ಎನ್ನುವ ಮಾತನಾಡುತ್ತಾರೆ.
ಸಂಬಂಧಿಸಿದ ಅಧಿಕಾರಿಗಳೇ ಈ ರೀತಿ ಮನಸ್ಥಿತಿ ಹೊಂದಿದರೆ ನೀರಿನ ಸಮಸ್ಯೆ ಬಗೆ ಹರಿಯುವುದು ಯಾವಾಗ ಅಳಗೋಡಿ ಓನಿಯ ಜನರು ಸಹನೆಯ ಕಟ್ಟೆ ಒಡೆಯುವ ಮುನ್ನ ಸಮಸ್ಯೆಗೆ ಪರಿಹಾರ ಸಿಗಲಿ ಎಂಬುದೇ ಜನರ ಆಸೆಯಾಗಿದೆ
ವರದಿ : ದುಂಡಪ್ಪ ಹೂಲಿ




