ಖಾನಾಪುರ : ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದ ಜನಪ್ರಿಯ ಶಾಸಕರು ಆದ ವಿಠ್ಠಲ ಹಲಗೇಕರ್ ರವರ 63 ನೇ ಜನ್ಮ ದಿನಾಚರಣೆ ನಿಮಿತ್ಯ ಖಾನಾಪುರ ಕ್ಷೇತ್ರದ ಜನ ಸಾಮಾನ್ಯರಿಗೆ ತಿಳಿಯಪಡಿಸಲು ಕೃಷಿ ಮೇಳ ಹಾಗೂ ವಿವಿಧ ಇಲಾಖೆಗಳಿಂದ ಏರ್ಪಡಿಸಿದ್ದ ವಸ್ತು ಪ್ರದರ್ಶನ ಮೇಳಗಳು ಜನ ಸಾಮಾನ್ಯರ ಗಮನ ಸೆಳೆದಿದ್ದು ಪ್ರಮುಖ ಆಕರ್ಷಣೆಯಾದವು. ಇದೇ ಸಂದರ್ಭದಲ್ಲಿ ಕೆ.ಎಲ್.ಇ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಗಮನ ಸೆಳೆಯಿತು.
ಇಂದು ಶಾಸಕರ ಹುಟ್ಟುಹಬ್ಬದ ನಿಮಿತ್ಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆನರಾ ಲೋಕಸಭಾ ಕ್ಷೇತ್ರದ ವಿಶ್ವೇಶ್ವರ ಹೆಗ್ಡೆ ಕಾಗೇರಿ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕರು ಆದ ಸಂಜಯ ಪಾಟೀಲ್, ಅರವಿಂದ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸುಬಾಶ್ ಪಾಟೀಲ್, ಮುರುಗೇಶ್ ಗಸ್ತಿ, ಪ್ರಮೋದ್ ಕೋಚೇರಿ, ಬಸವರಾಜು ಸಾನಿಕೊಪ್ಪ, ಸದಾನಂದ ಪಾಟೀಲ್ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ಪದಾಧಿಕಾರಿಗಳು ಹಾಗೂ ಎಲ್ಲಾ ವಿಠಲ ಹಲಗೇಕರ್ ಅಭಿಮಾನಿಗಳು ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ಎಲ್ಲಾ ಗಣ್ಯರು ಶಾಸಕ ವಿಠ್ಠಲ್ ಹಲಗೇಕರ್ ಅವರಿಗೆ ಸನ್ಮಾನ ಮಾಡಿ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರೊಂದಿಗೆ ಸಂಸದ ಕಾಗೇರಿ, Mlc ಹನುಮಂತ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಪಾಟೀಲ್ ಹಾಗೂ ಶಾಸಕರ ಸಹೋದರಿ ಅವಲಕ್ಕನವರು ಮಾತನಾಡಿದರು.
ಈ ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಅವರೊಲ್ಲಿ, ಹಂದಿ ಬಡಗ ನಾಥ, ತೋಪಿನಕಟ್ಟೆ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಒಟ್ಟಾರೆ ಇಂದು ಖಾನಾಪುರ ಶಾಸಕರು ಏರ್ಪಡಿಸಿದ್ದ ಜನಪರ ವಸ್ತುಪ್ರದರ್ಶನ ಮೇಳ, ಆರೋಗ್ಯ ಶಿಬಿರ ಹಾಗೂ ಬಾಣಂತಿಯರಿಗೆ ಸನ್ಮಾನ, ರೈತರಿಗಾಗಿ ಎತ್ತುಗಳ ಷರತ್ತು , ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ಜನ ಸಾಮಾನ್ಯರ ಮನ ಗೆದ್ದವು, ಒಟ್ಟಾರೆ ಅರ್ಥಪೂರ್ಣವಾಗಿ ಮಾದರಿ ಕಾರ್ಯಕ್ರಮ ವಾಗಿದ್ದು ವಿಶೇಷ.
ವರದಿ :ಬಸವರಾಜು