ತಿರುವನಂತಪುರ: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬ ಪತ್ತೆಯಾದ ಬಳಿಕ ಕೇರಳದ ಶಬರಿಮಲೆಯ ಪ್ರಸಾದದಲ್ಲಿ ಕೀಟನಾಶಕವಿರುವುದು ಪತ್ತೆಯಾಗಿದೆ. ಇದೀಗ ಶಬರಿಮಲೆಯ ಸುಮಾರು 5.5 ಕೋಟಿ ರೂ.ಯ ಅರವಣ ಪಾಯಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.
ಅರವಣ ಪಾಯಸದಲ್ಲಿ ಬಳಸಲಾಗಿರುವ ಏಲಕ್ಕಿಯಲ್ಲಿ ಅನುಮತಿಸಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಬಳಕೆ ಮಾಡಲಾಗಿದೆ ಎಂದು ದೂರು ಬಂದಿದೆ. ಈ ಹಿನ್ನೆಲೆ ಸುಮಾರು 6.65 ಲಕ್ಷ ಕಂಟೈನರ್‌ನಷ್ಟು ಅರವಣವನ್ನು ಬಳಕೆ ಮಾಡದೇ ಬಿಡಲಾಗಿದೆ.
ಅರವಣ ಸೇವನೆಗೆ ಯೋಗ್ಯವಾಗಿದ್ದರೂ ಸುಮಾರು 5.5 ಕೋಟಿ ರೂ. ಮೌಲ್ಯದ ದಾಸ್ತಾನನ್ನು ಗೊಬ್ಬರ ಮಾಡಲು ದೇವಸ್ಥಾನವನ್ನು ನಿರ್ವಹಣೆ ಮಾಡುವ ಟ್ರಾವಂಕೂರ್ ದೇವಸ್ವಂ ಬೋರ್ಡ್ ನಿರ್ಧರಿಸಿದೆ.
ಭಾರೀ ಪ್ರಮಾಣದ ಅರವಣವನ್ನು ವಿಲೇವಾರಿ ಮಾಡವುವುದು ಸವಾಲಾಗಿತ್ತು. ಇದನ್ನು ಕಾಡಿನಲ್ಲಿ ವಿಲೇವಾರಿ ಮಾಡಲು ವಿರೋಧ ವ್ಯಕ್ತವಾಗಿತ್ತು. ಭಕ್ತರ ಭಾವನೆಗೆ ಧಕ್ಕೆಯಾಗದಂತೆ ವಿಲೇವಾರಿ ಮಾಡಲು ಟಿಡಿಬಿ ಬಯಸಿದ್ದರಿಂದ ವೈಜ್ಞಾನಿಕ ವಿಲೇವಾರಿಗೆ ಟೆಂಡರ್ ಆಹ್ವಾನಿಸಿತ್ತು.
ಕೇರಳ ಮೂಲದ ಇಂಡಿಯನ್ ಸೆಂಟಿಫಿಗ್ ಎಂಜಿನಿಯರಿಂಗ್ ಸೆಲೂಷನ್ಸ್ ಸಂಸ್ಥೆ ಇದರ ಬಿಡ್ ಗೆದ್ದುಕೊಂಡು ಅರವಣವನ್ನು ಗೊಬ್ಬರ ಮಾಡುವ ಕೆಲಸವನ್ನು ವಹಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.