Ad imageAd image

ಬೆಳವಡಿ ಮಲ್ಲಮ್ಮ ಪ್ರಾಧಿಕಾರಕ್ಕಾಗಿ ಮನವಿ

Bharath Vaibhav
ಬೆಳವಡಿ ಮಲ್ಲಮ್ಮ ಪ್ರಾಧಿಕಾರಕ್ಕಾಗಿ ಮನವಿ
WhatsApp Group Join Now
Telegram Group Join Now

ಮಲ್ಲಮ್ಮನ ಬೆಳವಡಿ:ವಿಶ್ವದಲ್ಲಿ ಪ್ರಪ್ರಥಮ ಮಹಿಳಾ ಸೈನ್ಯ ಕಟ್ಟಿದ ಬೆಳವಡಿ ಮಲ್ಲಮ್ಮ ಪ್ರಾಧಿಕಾರಕ್ಕಾಗಿ ಮನವಿ ವೀರರಾಣಿ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ಹೋರಾಟ ಸಮಿತಿ ಮಲ್ಲಮ್ಮನ ಬೆಳವಡಿ. ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ಘೋಷಣೆಯಾಗಬೇಕೆಂದು ಸ್ಥಳೀಯ ಶಾಸಕರಾದ ಶ್ರೀ ಮಹಾಂತೇಶ್ ಕೌಜಲಗಿ ಅವರಿಗೆ ವೀರರಾಣಿ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ಹೋರಾಟ ಸಮಿತಿ ಹಾಗೂ ಗ್ರಾಮಸ್ಥರಿಂದ ಮನವಿ ಸಲ್ಲಿಸಲಾಯಿತು.

15 ವರ್ಷಗಳಿಂದ ಪ್ರಾಧಿಕಾರಕ್ಕಾಗಿ ಗ್ರಾಮದ ವಿವಿಧ ಸಂಘಟನೆಗಳು ಹೋರಾಟ ಮಾಡುತ್ತಿದ್ದು ಪ್ರಾಧಿಕಾರ ಶೀಘ್ರ ಈ ಅಧಿವೇಶನದಲ್ಲಿ ಘೋಷಣೆಯಾಗಬೇಕೆಂದು ಮನವಿಯಲ್ಲಿ ವಿನಂತಿಸಲಾಯಿತು ಹಾಗೂ ಬೆಳವಡಿಯಲ್ಲಿ 20 ಎಕರೆ ಸರ್ಕಾರಿ ಜಾಗವಿದ್ದು ಆ ಜಾಗದಲ್ಲಿ ವಿಶ್ವದಲ್ಲಿ ಪ್ರಥಮ್ ಮಹಿಳಾ ಸೈನ್ಯ ಕಟ್ಟಿದ ರಾಣಿ ಮಲ್ಲಮ್ಮಳ ಸವಿ ನೆನಪಿಗೆ ರಾಕ್ ಗಾರ್ಡನ ನಿರ್ಮಿಸಬೇಕೆಂದು ವಿನಂತಿಸಲಾಯಿತು ಫೆಬ್ರವರಿ 28 ರಂದು ನಡೆಯುವ ರಾಣಿ ಮಲ್ಲಮ್ಮ ಉತ್ಸವಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಔಹಾನಿಸಬೇಕೆಂದು ಶಾಸಕರಲ್ಲಿ ವಿನಂತಿಸಲಾಯಿತು ಮಾನ್ಯ ಶಾಸಕರು ಮನವಿಯನ್ನು ಸ್ವೀಕರಿಸಿ ಮಾತನಾಡುತ್ತಾ ಪ್ರಾಧಿಕಾರ ರಚನೆ ಮಾಡಲು ಸರಕಾರ ಮಟ್ಟದಲ್ಲಿ ಪ್ರಯತ್ನವನ್ನು ಮಾಡುತ್ತಿದ್ದೇನೆ.

ಅದೇ ರೀತಿ ರಾಗ ಗಾರ್ಡನ್ ಹಾಗೂ  ಮುಖ್ಯಮಂತ್ರಿಗಳನ್ನು ಉತ್ಸವಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು ಈ ಸಂದರ್ಭದಲ್ಲಿ ಪ್ರಾಧಿಕಾರ ಸಮಿತಿಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರಯ್ಯ ಬ ಕಾರಿಮನಿ ಉಪಾಧ್ಯಕ್ಷರಾದ ಬಿ ಜಿ ದೇಗಾವಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಹುಂಬಿ ಖಜಾಂಚಿ ರಾಚಪ್ಪ ಮಟ್ಟಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ವೀರಣ್ಣ ಕರಿಕಟ್ಟಿ ಶ್ರೀ ರಾಚಯ್ಯ ಸ್ವಾಮಿಗಳು ರೊಟ್ಟಯ್ಯನವರ ಮಠ ಡಾ ಡಿ ವೈ ಗರಗದ ಗ್ರಾಮ ಪಂಚಾಯತ್ ಸದಸ್ಯ ವಿಶ್ವನಾಥ್ ಕರಿಕಟ್ಟಿ ನಾಗಪ್ಪ ಕಿರಕಸಾಲಿ ಅರ್ಜುನ್ ಬಾಗೇವಾಡಿ ಸುಭಾಷ್ ಗೊದಳ್ಳಿ ಎಫ್ ಎಸ್ ಕಡಕೋಳ ನೂರ್ ಸಂಗ್ರೆಸ್ಕೊಪ್ಪ ರೋಹಿತ್ ಕುಲಕರ್ಣಿ ಮನು ತುರಾಯಿ ಯಾಸಿನ್ ಕಿತ್ತೂರು ಉಪಸ್ಥಿತರಿದ್ದರು.
ವರದಿ: ದುಂಡಪ್ಪ ಹೂಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!