ಸಿಂಧನೂರು :- ನಗರವು ಇಂದು ಬೃಹತ್ ಮಟ್ಟದಲ್ಲಿ ಬೆಳೆದು ಜಿಲ್ಲಾ ಕೇಂದ್ರವಾಗುವ ದೊಡ್ಡ ನಗರವಾಗಿದೆ ಆದರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಗಳ ಬಗ್ಗೆ ಹಾಗೂ ನಗರದಲ್ಲಿ ಹಲವಾರು ಸರ್ಕಾರಿ ವಸತಿ ನಿಲಯಗಳು

ಕಾರ್ಯನಿರ್ವಹಿಸಿದ್ದು ವಸತಿ ನಿಲಯಗಳಿಗೆ ಒದಗಿಸುಬೇಕಾದ ಆಹಾರ ಸುರಕ್ಷತೆ ಮತ್ತು ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸುವಲ್ಲಿ ವಿಫಲರಾಗಿದ್ದಾರೆ ಆದ್ದರಿಂದ ಈಗಾಗಲೇ ಕಳೆದ ಬಾರಿ ಮೆಟ್ರಿಕ್ ನಂತರ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯಗಳಲ್ಲಿ ಕುಲುಷಿತ ಆಹಾರ ಮತ್ತು ಕುಲುಷಿತ ನೀರು ಸೇವಿಸಿ ವಿದ್ಯಾರ್ಥಿಗಳು ಆಸ್ಪತ್ರೆಯ ದಾಖಲಾಗಿ ಚಿಂತಾ ಜನಕ ಸ್ಥಿತಿಗೆ ತಲುಪಿದ್ದು ಉದಾಹರಣೆ
ಇದ್ದು ಆದ್ದರಿಂದ ತಾವುಗಳು ಸಂಬಂಧಪಟ್ಟ ಅಧಿಕಾರಿಗಳಗೆ ಸೂಚಿಸಿ ನಗರದ ಎಲ್ಲಾ ವಸತಿ ನಿಲಯದಲ್ಲಿ ಸುರಕ್ಷತಾ ಕ್ರಮವನ್ನು ನಿರ್ವಹಿಸಲು ಮತ್ತು ಜಾಗೃತಿಯನ್ನು ಮೂಡಿಸಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲು ತಾವುಗಳು ಸೂಚಿಸಬೇಕು ಹಾಗೂ ತಾಲೂಕ ಸರಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು ತಾವುಗಳು ಪರಿಶೀಲನೆ ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ , ಮೌನೇಶ್ ಜಾಲವಾಡಗಿ. ಮಾನ್ಯ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಮಾನವಿ ನೀಡಿದರು.
ಈ ಸಂದರ್ಭದಲ್ಲಿ – ವಿದ್ಯಾರ್ಥಿ ಪರಿಷತ್ ತಾಲೂಕ್ ಘಟಕದ ಅಧ್ಯಕ್ಷ. ದುರ್ಗೇಶ ಕಲ್ಮಂಗಿ.. ತಾಲೂಕ ಪ್ರ. ಕಾರ್ಯದರ್ಶಿ. ನರಸಪ್ಪ ಅಮರಾಪುರ.. ಮುಖಂಡರಾದ – ಹನುಮಂತ ಹಂಪನಾಳ.. ಮರಿಯಣ್ಣ ಸಿಂಧನೂರು ಇದ್ದರು
ವರದಿ :- ಬಸವರಾಜ ಬುಕ್ಕನಹಟ್ಟಿ




