ಬಾದಾಮಿ:- ಬಾದಾಮಿ ಕಾಂಗ್ರೆಸ್ ಮುಖಂಡರು ಪತ್ರಿಕಾಭವನದಲ್ಲಿ ಗೋಷ್ಠಿ ನಡೆಸಿ ಮಾತನಾಡಿದರು.ಕಳೆದ ಆಗಸ್ಟ್ 3೦ ರಂದು ಗುಳೇದಗುಡ್ಡ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ದಿನ ಗಲಭೆ ಸೃಷ್ಟಿಸಲು ಗುಂಡಾಗಳನ್ನು ಕರೆಸಿದ್ದ ಘಟನೆಗೆ ಸಂಬಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ನಾಲ್ವರು ಆರೋಪಿಗಳನ್ನು ಬಂಧಿಸಬೇಕು.
ತಪ್ಪಿತಸ್ಥರು ಯಾರೇ ಆಗಿದ್ದರೂ ಸಹ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬಾದಾಮಿ ತಾಲೂಕಾ ಕಾಂಗ್ರೆಸ್ ಪಕ್ಷದ ಮುಖಂಡರು ರವಿವಾರ ಬಾದಾಮಿ ಪೊಲೀಸ್ ಠಾಣೆ ಪಿ.ಎಸ್.ಐ.ವಿಠ್ಠಲ ನಾಯಿಕ ಅವರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮುಖಂಡರಾದ ಪುರಸಭೆ ಅಧ್ಯಕ್ಷ ಪಾಂಡು ಕಟ್ಟೀಮನಿ, ಕೆಪಿಸಿಸಿ ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ. ಎಸ್..ಹೊಸಗೌಡ್ರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವು ಹಿರೇಮಠ, ಹನಮಂತ ಅಪ್ಪನ್ನವರ, ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ದ್ಯಾಮಣ್ಣ ಯಾಕನಾಳ, ಕೋನಪ್ಪ ಕಲ್ಲಾಪೂರ, ಎಂ. ಡಿ. ರಾಜೂರ, ಕನಕಪ್ಪ ಕಂತಿ, ಮೈಲಾರಿ ಕಲ್ಲಾಪೂರ, ಈರಣ್ಣ ಡಬಗಲ್, ಕುಮಾರ ಹುಲ್ಲೂರ, ಶಫೀ ಜಲಗೇರಿ, ಮಾರುತಿ ಗೌಡರ, ಶಿವಾನಂದ ಮುತ್ತಲಗೇರಿ ಸೇರಿದಂತೆ ಇತರರು ಹಾಜರಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ