ನವದೆಹಲಿ: ತೈಲ ಕಂಪನಿಗಳು ಪೆಟ್ರೋಲ್ ಪಂಪ್ ಡೀಲರ್‌ಗಳಿಗೆ ನೀಡುವ ಕಮಿಷನ್ ಅನ್ನು ಹೆಚ್ಚಿಸಿರುವುದರಿಂದ ಇಂಧನ ಬೆಲೆ ಇಳಿಕೆಯಾಗಲಿದೆ.
ಧಂತೇರಸ್‌ನ ಶುಭ ಸಂದರ್ಭದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ) ಮಂಗಳವಾರ ಪೆಟ್ರೋಲ್ ಪಂಪ್ ಡೀಲರ್‌ಗಳಿಗೆ ಪಾವತಿಸಬೇಕಾದ ಡೀಲರ್ ಕಮಿಷನ್‌ನಲ್ಲಿ ಹೆಚ್ಚಳವನ್ನು ಘೋಷಿಸಿವೆ.
ಇದರಿಂದಾಗಿ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಲಿದೆ. ದೂರದ ಸ್ಥಳಗಳಲ್ಲಿ (OMC ಗಳ ಪೆಟ್ರೋಲ್ ಮತ್ತು ಡೀಸೆಲ್ ಡಿಪೋಗಳಿಂದ ದೂರವಿರುವ) ಗ್ರಾಹಕರಿಗೆ ಅನುಕೂಲವಾಗುವಂತೆ ಕಂಪನಿಗಳು ಅಂತರ-ರಾಜ್ಯ ಸರಕು ಸಾಗಣೆ ಶುಲ್ಕವನ್ನು ಪರಿಷ್ಕರಿಸಿವೆ.