Ad imageAd image

ಮಮದಾಪುರ ಕ್ಲಸ್ಟರ ಮಟ್ಟದ ಕ್ರೀಡಾಕೂಟಕ್ಕೆ ಪಾರಿವಾಳ ಹಾರಿಸಿ ಚಾಲನೆ

Bharath Vaibhav
ಮಮದಾಪುರ ಕ್ಲಸ್ಟರ ಮಟ್ಟದ ಕ್ರೀಡಾಕೂಟಕ್ಕೆ ಪಾರಿವಾಳ ಹಾರಿಸಿ ಚಾಲನೆ
WhatsApp Group Join Now
Telegram Group Join Now

ಗೋಕಾಕ : ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯ ಅದರ ಜೊತೆಯಲ್ಲಿ ಗ್ರಾಮೀಣ ಪ್ರತಿಭೆ ಹೊರಹೊಮ್ಮಲು ಅವಕಾಶ ಸಿಗುತ್ತದೆ ಎಂದರು.

ಗೋಕಾಕ ಶಾಸಕ ರಮೇಶ ಜಾರಕಿಹೋಳಿಯವರ ಆಪ್ತ ಸಹಾಯಕರುಗಳಾದ ಸುರೇಶ ಸನದಿ ಮತ್ತು ಕೆಂಪಣ್ಣಾ ಮೈಲನ್ನವರ ಹೇಳಿದರು.

ಗೋಕಾಕ ತಾಲೂಕಿನ ಮಮದಾಪುರ ಗ್ರಾಮದಲ್ಲಿರುವ ಕೆಬಿ ಎಸ್ ಮತ್ತು ಕೆಜಿ ಎಸ್ ಶಾಲೆಯಲ್ಲಿ ಮಮದಾಪುರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ಕ್ರೀಡಾಕೂಟವನ್ನು ಸರಸ್ವತಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪಾರಿವಾಳ ಹಾರಿಸಿ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಎಸ್, ವಿ.ಕುಲಕರ್ಣಿ ಇವರು ಕ್ರೀಡಾ ಜ್ಯೋತಿ ಸ್ವೀಕರಿಸಿ ನಮ್ಮ ದೈಹಿಕ ಮಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ತುಂಬಾ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಕ್ರೀಡೆಗಳು ಮುಖ್ಯ ಮತ್ತು ಗ್ರಾಮೀಣ ಪ್ರತಿಭೆ ಹೊರಹೊಮ್ಮಲು ವಲಯ ಮಟ್ಟದ ಕ್ರೀಡಾಕೂಟ ಒಂದು ಪ್ರಯತ್ನವಾಗಿದೆ ಅದರ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಲು ಮುಂದಾಗಬೇಕೆಂದರು.

ಎಸ್,ಡಿ,ಎಮ್, ಸಿ ಅದ್ಯಕ್ಷರುಗಳಾದ ಅಶೋಕ ಗೋಪಾಳಿ, ಮಹೇಶ ಪಾಟೀಲ
ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಶಾಸಕರ ಆಪ್ತ ಸಹಾಯಕ ಸುರೇಶ ಸನದಿ ಗುಂಡು ಎಸೆಯುವುದರ ಮೂಲಕ ಕ್ರೀಡಾಕೂಟ ಉದ್ಘಾಟಿಸಿದರು ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಸ್,ಎಸ್,ದಂಡಾಪುರ ಇವರು ಪ್ರತಿಜ್ಞಾವೀದಿ ಬೋದಿಸಿದರು.

ಈ ಸಂದರ್ಭದಲ್ಲಿ ಸ್ಥಳಿಯ ಗ್ರಾಮ ಪಂಚಾಯತ ಸದಸ್ಯರು, ಕ್ರೀಡೆಗಳಲ್ಲಿ ಬಾಗವಹಿಸಿದ್ದ ಶಾಲೆಗಳ ದೈಹಿಕ ಶಿಕ್ಷಕರು,ಶಿಕ್ಷಕಿಯರು ಉಪಸ್ಥಿತರಿದ್ದರು.

ವರದಿ  : ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!