ಬೆಳಗಾವಿ : ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪರ ವೈಯಕ್ತಿಕವಾಗಿ ಸಮುದಾಯದ ಬೆಂಬಲ ಎಂದಿರುವ ಕೂಡಲಂಸಗಮ ಸ್ವಾಮೀಜಿಯವರನ್ನು ಬದಲಾವಣೆ ಮಾಡುತ್ತೇವೆ ಎಂಬ ಶಾಸಕ ಹಾಗೂ ಪಂಚಮ ಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಟಾಂಗ್ ನೀಡಿದರು.
ಯಾವ ಅಂವಾ ಸ್ವಾಮೀಜಿ ಅವರನ್ನು ತೆಗೆಯುವ ಮಾತನಾಡುತ್ತಿರೋದು? ಕಾಶಪ್ಪನವರ್ ಬಗ್ಗೆ ಮಾಧ್ಯಮದವರು ಕೇಳುತ್ತಿದ್ದಂತೆ ಗರಂ ಆದ ಯತ್ನಾಳ್, ವಿಜಯೇಂದ್ರ ಹೇಳಿ ಕಳ್ಸಿದ್ದಾನಾ? ಅಂತಹ ಹಂದಿಗಳ ಬಗ್ಗೆ ಯಾಕೆ ಕೇಳುತ್ತೀರಿ. ನಾನು ಹಂದಿಗಳ ಮಾತಿಗೆಲ್ಲ ಪ್ರತಿಕ್ರಿಯೆ ನೀಡಲ್ಲ. ಎಲ್ಲಾ ಸಮುದಾಯದ ಪರ ನಾನು ಕೆಲಸ ಮಾಡಿದ್ದೇನೆ. ಹಾಲುಮತ, ತಳವಾರ, ಅಂಬಿಗರ ಪರ ಮಾತಾಡಿದ್ದೇನೆ. ಹಂದಿಗಳ ಬಗ್ಗೆ ನಾನು ಮಾತಾಡಲ್ಲ ಎಂದು ತಿವಿದರು.
ಕಾಶಪ್ಪನವರ್ ಅವರನ್ನು ಪರೋಕ್ಷವಾಗಿ ಹಂದಿಗೆ ಹೋಲಿಸಿದ ಯತ್ನಾಳ್ ಅವರು, ಕೂಡಲಸಂಗಮ ಸ್ವಾಮೀಜಿ ಅವರನ್ನ ಯಾರು ಯಾರು ದಿಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಮಂತ್ರಿ ಮಾಡಿ ಅಂತಾ ಕರೆದುಕೊಂಡು ಹೋಗಿದ್ದಾರೆ. ಅವರ ಲಾಭವನ್ನು ಪಡೆದಿದ್ದಾರೆ ಅಂತಾ ಗೊತ್ತಿದೆ.
ನಾನು ನನ್ನ ರಾಜಕೀಯ ಜೀವನದಲ್ಲಿ ಒಮ್ಮೆಯೂ ಮಂತ್ರಿ ಮಾಡಿ ಅಂತಾ ಕರೆದುಕೊಂಡು ಸ್ವಾಮೀಜಿಗಳನ್ನ ಬಳಸಿಕೊಂಡಿಲ್ಲ ಎಂದರು. ನಮ್ಮದು ಕೂಡಲಸಂಗಮ ಸ್ವಾಮೀಜಿಯವರದ್ದು ಮೀಸಲಾತಿ ಹೋರಾಟಕ್ಕೆ ಮಾತ್ರ ಸಂಬಂಧ. ಲಕ್ಷ್ಮಿ ಹೆಬ್ಬಾಳ್ಕರ್, ಕುಲಕರ್ಣಿ ಕೂಡ ಸ್ವಾಮೀಜಿ ಅವರನ್ನು ಉಪಯೋಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.