ಚಿಟಗುಪ್ಪ : ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮದ ಪಿಕೆಪಿಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಮತ ಪಡೆದು ಪೂರ್ಣ ಪೆನಾಲ್ ಜಯಗಳಿಸಿದೆ.
ಭಾನುವಾರ ಪಿಕೆಪಿಎಸ್ ಕಛೇರಿಯಲ್ಲಿ ಬೆಳಗ್ಗೆ 9 ಗಂಟೆಗೆಯಿಂದ ಸಂಜೆ 4 ಗಂಟೆವರೆಗೆ ಮತದಾನ ಜರುಗಿತ್ತು.
ಬಳಿಕ ಸಂಜೆ 5 ಗಂಟೆ ಸೂಮಾರಿಗೆ ಮತದಾನ ಎಣಿಕೆ ಆರಂಭಗೊಂಡಿತ್ತು.ಅಶೋಕ ಶೇರಿಕಾರ,ಉಮೇಶ ಕುಲಕರ್ಣಿ,ರವಿ ಹಾವಶೆಟ್ಟಿ, ರವೀಂದ್ರ ಪಾವಡಶೆಟ್ಟಿ,ವಿಜಯಕುಮಾರ, ಕಸ್ತೂರಬಾಯಿ ಧಡಿಮಾಳ,ಚಂದ್ರಕಲಾಬಾಯಿ,ವೀರಶಟ್ಟಿ ನಿಂಬುರೆ,ಲಕ್ಷ್ಮಣ ಸೇಟ್ವಾಜಿ,ಮೆಹೇಬೂಬ್ ಖಾನ್ ಪಟೇಲ್,ಸೋಮಶೇಖರ್ ಧಡಿಮಾಳ,ಕೈಲಾಸ ಪಾವಡಶೆಟ್ಟಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಧಿಕಾರಿ ಶಿವಾಜಿ ಚುನಾವಣೆ ಫಲಿತಾಂಶ ಘೋಷಣೆ ಮಾಡಿದರು.
ನಂತರ ಪಟಾಕಿ ಸಿಡಿಸಿ ಸಂಭ್ರಮಾಚರಣೆಮಾಡಿ ಪಿಕೆಪಿಎಸ್ ಸೊಸೈಟಿಯಿಂದ ಗ್ರಾಮದ ಗಣ್ಯರು ಹಾಗೂ ಕಾಂಗ್ರೆಸ್ ಬೆಂಬಲಿತ ಪೆನಾಲಿನ ಮುಖಂಡತ್ವ ವಹಿಸಿಕೊಂಡಿದ್ದಂತಹ ಶ್ರೀಮಂತ ಪಾಟೀಲ ಅವರ ಮನೆವರೆಗೆ ಮೆರವಣಿಗೆ ಮಾಡಿ ಮೆರವಣಿಗೆ ಉದ್ದಕ್ಕೂ ಆಯ್ಕೆಯಾದ ನೂತನ ನಿರ್ದೇಶಕರು ಹಾಗೂ ಬೆಂಬಲಿಗರು ಕುಣಿದು ಕುಪ್ಪಳಿಸಿದರು.
ವರದಿ : ಸಜೀಶ ಲಂಬುನೋರ